

ಬಾಗಲಕೋಟೆ: ನವನಗರದ ಸೆಕ್ಟರ್ ನಂ.೧೬ರಲ್ಲಿ ನಿರ್ಮಾಣವಾಗುತ್ತಿರುವ ಪ್ರಾರ್ಥನಾ ಮಂದಿರಕ್ಕೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದವರು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಬಿಟಿಡಿಎ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಹಿಂದೂ ವಿರೋಽ ಬಿಟಿಡಿಎ ಅಽಕಾರಿಗಳಿಗೆ ಽಕ್ಕಾರ ಮತ್ತು ಪ್ರಾರ್ಥನಾ ಮಂದಿರ ನಿರ್ಮಾಣ ನಿಲ್ಲಿಸಿ ಎಂದು ಘೋಷಣೆ ಹಾಕಿದರು.
ಈ ಸಂದರ್ಭದಲ್ಲಿ ಹಿಂಜಾವೇ ಮುಖಂಡ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಅನಽಕೃತವಾಗಿ ನಿರ್ಮಾಣವಾಗುತ್ತಿರುವ ಪ್ರಾರ್ಥನಾ ಮಂದಿರ ನಿರ್ಮಾಣವಾಗುವುದನ್ನು ತಡೆಯಲು ಬಿಟಿಡಿಎ ಅಽಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ. ಅನಽಕೃತವಾಗಿ ನಿರ್ಮಾನವಾಗುತ್ತಿರುವ ಪ್ರಾರ್ಥನಾ ಮಂದಿರ ಕಟ್ಟಡಕ್ಕೆ ಅನುಮತಿ ನೀಡಿರುವ ಅಽಕಾರಿ ತಕ್ಷಣ ಅಮಾನತ್ತು ಮಾಡಬೇಕು. ಕಟ್ಟಡ ನಿರ್ಮಾಣÀವಾಗಿರುವುದನ್ನು ಬಿಟಿಡಿಎ ಅಽಕಾರಿಗಳು ಹಾಗೂ ಪೊಲೀಸರು ತೆರವುಗೊಳಿಸಿದರೆ ಸಾಲದು ಕಾನೂನುಬದ್ಧವಾಗಿ ನೀಡಿರುವ ಎಲ್ಲ ಅನುಮತಿಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಸೆ.೧೬ರಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣವಾದರೆ ನಿತ್ಯ ಬೆಳಗ್ಗೆ ಮೈಕ್ ಧ್ವನಿಯಿಂದ ನಸುಕಿನ ಜಾವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ. ಈಗಾಗಲೇ ಸುತ್ತಮುತ್ತಲಿನ ಬೇರೆ ಸೆಕ್ಟರ್‌ಗಳಲ್ಲಿ ಇರುವ ಮಸೀದಿಗಳಿಂದ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ನಸುಕಿನಲ್ಲೇ ಧ್ವನಿವರ್ಧಕ ಬಳಸುತ್ತಿರುವುದೇ ಈ ಸೆಕ್ಟರ್‌ಗೆ ಕೇಳಿಸುತ್ತದೆ. ಇನ್ನೂ ೧೬ ನೇ ಸೆಕ್ಟರ್‌ದಲ್ಲಿ ಮಸೀದಿ ನಿರ್ಮಾಣವಾದರೆ ಸುತ್ತಲಿನ ಎಲ್ಲ ನಿವಾಸಿಗಳಿಗೆ ನಿರಂತರ ತೊಂದರೆಯಾಗಲಿದೆ ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಪ್ರಾರ್ಥನಾ ಮಂದಿರ ನಿರ್ಮಾಣವಾದ ಮೇಲೆ ಬೇರೆ ಪ್ರದೇಶಗಳಿಂದ ಅಪರಿಚಿತರು ಧರ್ಮ ಪ್ರಚಾರ ಮತ್ತಿತರ ಹೆಸರಿನಲ್ಲಿ ಗುಂಪು ಗುಂಪಾಗಿ ಬಂದು ಮಸೀದಿಗಳಲ್ಲಿ ನೆಲೆಸುವುದು ಸಾಮಾನ್ಯವಾಗಲಿದೆ. ಬೇರೆ ಪ್ರದೇಶಗಳಿಂದ ಇಲ್ಲಿ ಬಂದು ಹೋಗುವ ಅವರು ಯಾರು ? ಎಲ್ಲಿಂದ ಬಂದರು? ಹೀಗೆ ಅವರ ಬಗ್ಗೆ ಯಾವ ಮಾಹಿತಿಯೂ ಇರುವುದಿಲ್ಲ. ಹೀಗಿರುವಾಗ ಬೇರೆ ಪ್ರದೇಶಗಳಿಂದ ಹೀಗೆ ಇಲ್ಲಿ ಬರುವವರು ಇಲ್ಲಿ ಅಪರಾಽಕ ಕೃತ್ಯಗಳಲ್ಲಿ ಭಾಗವಹಿಸಿದರೆ ಅದಕ್ಕೆ ಯಾರು ಜವಾಬ್ದಾರರು ಅದರಿಂದ ಸ್ಥಳೀಯ ನಿವಾಸಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲ ಕಾರಣಗಳಿಂದ ಉದ್ದೇಶಿಸಿತ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಆಕ್ಷೇಪ ಇದ್ದು ಇದಕ್ಕೆ ಸ್ಥಳೀಯರು ಸಹ ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ. ಅಲ್ಲಿ ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಮುಖಂಡರಾದ ಶಿವಾಜಿ ಪವಾರ, ಪಂಕಜ ನಿಕ್ಕಂ, ಮನೋಜ ಕರಡಿವಾಲ, ನಾಗೇಶ ಅಂಬಿಗೇರ, ಪ್ರಕಾಶ ನಿರಂಜನ್, ಪ್ರಭು ನಾಯಕ್ ಸೇರಿದಂತೆ ಇದ್ದರು.