

ಬಾಗಲಕೋಟೆ: ಪ್ರಾಣಿ ಜನ್ಯ ರೋಗಗಳ ನಿರ್ವಹಣೆ ಆಗದಿದ್ದರೆ ಮಾನವನ ಆರೋಗ್ಯದ ಮೇಲೆ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ ಎಂದು ಜಿಲ್ಲಾ ಸಮೀಕ್ಷಣಾಽಕಾರಿ ಡಾ.ದಯಾನಂದ ಕರೆನ್ನವರ ಹೇಳಿದರು.
ನಗರದ ಡಾ.ಸುಭಾಸ್ ಪಾಟೀಲ್ ಇನ್ಸಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜ್‌ನಲ್ಲಿ ಮಂಗಳವಾರ ವಿಶ್ವ ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳ ದಿನಾಚರಣೆ ಅಂಗವಾಗಿ ನಡೆದ ವಿಶೇಷ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ನಾವು ಶ್ರೇಷ್ಠ ವಿಜ್ಞಾನಿ ಲೂಯಿಸ್ ಪ್ಯಾಶ್ಚರ್ ಅವರ ಗೌರವಾರ್ಥ ಜು.೬ ರಂದು ವಿಶ್ವ ಪ್ರಾಣಿಜನ್ಯ ರೋಗ ದಿನವನ್ನು ಆಚರಿಸುತ್ತೇವೆ. ಪ್ರಾಣಿಜನ್ಯ ರೋಗಗಳಲ್ಲಿ ಒಂದಾಗಿರುವ ರೇಬಿಸ್ ವಿರುದ್ಧ ಮೊದಲನೆಯ ಲಸಿಕೆ ಲೂಯಿಸ್ ಪ್ಯಾಶ್ಚರ್ ಆವಿಷ್ಕರಿಸಿದವರು. ಸಾಂಕ್ರಾಮಿಕ ರೋಗಗಳ ಜತೆ ಇಲಿ ಜ್ವರ, ಹಂದಿಜ್ವರ, ರೇಬೀಸ್ ಹೀಗೆ ಪ್ರಾಣಿಗಳಿಂದ ಬರುತ್ತವೆ. ಆದ್ದರಿಂದ ಪ್ರಾಣಿಗಳ ಕಡಿತ ಕಾಯಿಲೆಗಳ ಬಗ್ಗೆ ಮುಂಜಾಗ್ರತೆ ಅಗತ್ಯ ಎಂದರು.
ಜಿಲ್ಲಾ ಎಪಿಡಮೋಲಾಜಿಸ್ಟ ಡಾ. ಸೀಮಾ ಹುದ್ದಾರ ಮಾತನಾಡಿ, ನೈಸರ್ಗಿಕವಾಗಿ ಪ್ರಾಣಿ ಮತ್ತು ಮನುಷ್ಯ ಸಂಕುಲದ ನಡುವೆ ಪರಸ್ಪರ ರೋಗ ಹರಡುವ ಪ್ರಕ್ರಿಯೆ ಇದೆ. ಪ್ರಾಣಿ ಜನ್ಯ ರೋಗಗಳ ಸರಿಯಾದ ನಿರ್ವಹಣೆ ಆಗದಿದ್ದರೆ ಮನುಕುಲದ ಮೇಲೆ ಭಾರಿ ಪರಿಣಾಮ ಬೀರಲಿದೆ. ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಮೇಲಿಂದ ಮೇಲೆ ಕೈಗಳನ್ನು ತೊಳೆದುಕೊಳ್ಳಬೇಕು. ನಾಯಿ ಸೇರಿದಂತೆ ಇತರೆ ಸಾಕು ಪ್ರಾಣಿಗಳಿಗೆ ಮುಂಜಾಗೃತ ಕ್ರಮವಾಗಿ ಲಸಿಕೆ ಹಾಕಿಸಿದರೆ ರೋಗಗಳ ನಿಯಂತ್ರಣ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಸುಭಾಷ ಪಾಟೀಲ್ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಸಂಗಮೇಶ ರಕರಡ್ಡಿ, ಡಿಟಿಒ ಡಾ.ಸುವರ್ಣ ಕುಲಕರ್ಣಿ, ಡಿಎಲ್‌ಒ ಡಾ.ಎಸ್.ಸಿ.ಪಾಟೀಲ್, ಡಾ.ಅಜೀತ್ ಪಾಟೀಲ, ಮಲ್ಲನಗೌಡ ಪಾಟೀಲ್, ಹಿರಿಯ ಆರೋಗ್ಯ ನಿರೀಕ್ಷಣಾಽಕಾರಿ ಎಚ್.ಪಿ.ನಾಯ್ಕರ, ತಂಬಾಕು ಸಲಹೆಗಾರರು ಶಶಿಕುಮಾರ್ ಕುಮಟಳ್ಳಿ, ಮೈಕ್ರೋಬಯಾಲಾಜಿಸ್ಟ್ ಸುಪ್ರಿಯಾ ಪಂಡಿತ್, ಜಿಲ್ಲಾ ಡಾಟಾ ಮ್ಯಾನೇಜರ್ ಪ್ರವೀಣ ಕಾಶಿನಕುಂಟಿ ಸೇರಿದಂತೆ ಡಾ.ಸುಭಾಷ್ ಪಾಟೀಲ ಪ್ಯಾರಾಮೆಡಿಕಲ್ ಕಾಲೇಜನ ವಿದ್ಯಾರ್ಥಿಗಳು, ಸಮೀಕ್ಷಣಾ ಘಟಕದ ಸಿಬ್ಬಂದಿ ಇದ್ದರು