ಪ್ರಾಣಿಗಳಿಂದ ಹರುಡುವ ರೋಗಗಳ ಅರಿವಿರಲಿ

Published on

ಆಯುರ್ವೇದ ವೈದ್ಯ ವಿಜಯಕುಮಾರ್ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ

ಮನುಷ್ಯನಿಗೆ ಬಹುಪಾಲು ರೋಗಗಳು ಪ್ರಾಣಿಗಳಿಂದ ಬರುತ್ತವೆ. ಪ್ರಾಣಿಗಳಲ್ಲಿರುವ ವೈರಸ್, ಬ್ಯಾಕ್ಟೀರಿಯಾದಿಂದ ಮನುಷ್ಯರಿಗೆ ಸೋಂಕು ತಗಲುತ್ತವೆ. ಪ್ರಾಣಿಗಳ ಮೇಲಿರುವ ರೋಗಾಣುಗಳು ಆಹಾರದ ಮೂಲಕ ಮನುಷ್ಯನ ದೇಹಕ್ಕೆ ಸೇರುತ್ತವೆ. ಈ ಬಗ್ಗೆ ಎಲ್ಲರೂ ಜಾಗ್ರತೆಯಿಂದಿರುವುದು ಅಗತ್ಯ ಎಂದು ಆಯುರ್ವೇ ವೈದ್ಯ ಡಾ.ವಿಜಯಕುಮಾರ್ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಝೋನೋಸಿಸ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಾಣಿಗಳೊಂದಿಗಿನ ನೇರ ಅಥವಾ ಪರೋಕ್ಷ ಸಂಪರ್ಕದಿಂದ ಕಾಯಿಲೆಗಳು ಹರಡುತ್ತದೆ. ಸೋಂಕಿತ ಜೀವಂತ ಕುರಿ, ಕೋಳಿ, ಇಲಿ, ಹಸು, ಸರೀಸೃಪ, ಉಭಯಚರ, ಕೀಟಗಳು ಇತರ ಸಾಕು ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳಿಂದ ಝೋನೋಟಿಕ್ ಕಾಯಿಲೆ ತಗಲುತ್ತದೆ. ಅದರಲ್ಲೂ ಝೋನೋಟಿಕ್ ಕಾಯಿಲೆ ಹೆಚ್ಚಾಗಿ ಸೊಳ್ಳೆಗಳಿಂದ ಹರುಡುತ್ತವೆ. ಜ್ವರ, ಕೆಮ್ಮು, ನೆಗಡಿ, ವಿಪರೀತ ಮೈ-ಕೈ ನೋವು, ಗಂಟಲು ಊತ, ವಾಂತಿ-ಭೇದಿ ಝೋನೋಟಿಕ್ ಕಾಯಿಲೆಗಳ ಸಾಮಾನ್ಯ ಲಕ್ಷಣಗಳು. ಹಾಗಾಗಿ ನಾಗರಿಕರು ಎಚ್ಚರಿಕೆಯಿಂದಿರಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀನಿವಾಸ್, ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net