ಪ್ರಾಣಿ ಬೇಟೆಯಾಡುತ್ತಿದ್ದವನ ಬಂಧನ

25 joida 01
Published on

ಜೊಯಿಡಾ: ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವಲಯದಲ್ಲಿ ವನ್ಯ ಪ್ರಾಣಿ ಬೇಟೆಯಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಅಣಶಿ ವನ್ಯ ಜೀವಿ ವಲಯದ ಸಾವಂತ ಮಾರ್ತR ಶಾಖೆಯ ಬಿಡೋಲಿ ಅರಣ್ಯದಲ್ಲಿ ಅಣಶಿ, ಗುಂದ, ಪಣಸೋಲಿ ವಲಯದ ಅರಣ್ಯ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ರಾತ್ರಿ ಗಸ್ತು ತಿರುಗುತ್ತಿರುವ ವೇಳೆ ಅಂಬೋಳ್ಳಿಯ ಸಂಜಯ ರಾಮ ಕಣ್ಣೇಕರ, ಬಂದೂಕು, ಮದ್ದುಗುಂಡು ಮತ್ತು ಹೆಡ್ ಲೈಟ್ ಸಮೇತ ಸಿಕ್ಕಿ ಬಿದ್ದಿದ್ದಾನೆ. ಈತನ ಮೇಲೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನ ಜೊತೆ ಇದ್ದ ಮತ್ತಿಬ್ಬರು ತಪ್ಪಿಸಿಕೊಂಡಿದ್ದಾರೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net