ಪ್ರಾಚೀನ ಆಹಾರ ಪದ್ದತಿ ಮುನ್ನೆಲೆಗೆ ಬರಲಿದೆ

bkt-14-1
ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಹಾಗೂ ಕೃಷಿ ಸಂಬAಽತ ಇಲಾಖೆ, ಧಾರವಾಡ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ತಂತ್ರಜ್ಞಾನ ಸಹಯೋಗದಲ್ಲಿ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ನವನಗರದ ಕಲಾಭವನದಲ್ಲಿ ಶನಿವಾರ ಹಮ್ಮಿಕೊಂಡ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳ ಕಾರ್ಯಕ್ರಮ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಉದ್ಘಾಟಿಸಿದರು.
Published on

ಬಾಗಲಕೋಟೆ: ಹಿಂದೆ ಬಡವರ ಆಹಾರವಾಗಿದ್ದ ಸಜ್ಜೆ, ಜೋಳ, ನವಣೆ ಪದಾರ್ಥಗಳು ಇಂದು ಸಿರಿವಂತರ ಆಹಾರವಾಗುತ್ತಿದ್ದು, ಪ್ರಾಚೀನ ಕಾಲದ ಆಹಾರ ಪದ್ದತಿ ಮತ್ತೆ ಮರುಕಳುಹಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಹಾಗೂ ಕೃಷಿ ಸಂಬAಽತ ಇಲಾಖೆ, ಧಾರವಾಡ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ತಂತ್ರಜ್ಞಾನ ಸಹಯೋಗದಲ್ಲಿ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ನವನಗರದ ಕಲಾಭವನದಲ್ಲಿ ಶನಿವಾರ ಹಮ್ಮಿಕೊಂಡ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕತೆಯ ಭರಾಟೆಯಲ್ಲಿ ಪ್ರತಿಯೊಬ್ಬರ ಜೀವನ ಶೈಲಿ ಜೊತೆಗೆ ಆಹಾರ ಪದ್ದತಿಗಳು ಬದಲಾಗುತ್ತಿದೆ ಎಂದರು.

ವರ್ಷದಿAದ ವರ್ಷಕ್ಕೆ ಬದಲಾಗುತ್ತಿರುವ ಆಹಾರ ಪದ್ಧತಿಯಿಂದ ಅದಕ್ಕೆ ಅನುಗುಣವಾಗಿ ರೋಗಗಳ ಸಂಖ್ಯೆಯು ಹೆಚ್ಚಾಗುತ್ತಿವೆ. ಕೆಲವೊಂದು ರೋಗಗಳು ವಿಜ್ಞಾನಿ ಹಾಗೂ ವ್‌ಐದ್ಯರಿಗೂ ತಿಳಿಯದಂತಾಗಿರುವುದು ವಿಪರ್ಯಾಸ. ಹಿಂದೆ ನಿಯಮಿತವಾದ ಆಹಾರ ಕಲಬರಕೆ ರಹಿತ ಆಹಾರ, ರಾಸಾಯನಿಕ ಬಳಸದ ಕೃಷಿ ಬೇವರು ಸುರಿಸ ಶ್ರಮದಿಂದಾಗಿ ಉತ್ತಮ ಆರೋಗ್ಯದೊಂದಿಗೆ ದೀರ್ಘಾಯುಷಿ ಆಗತ್ತಿದ್ದರು. ಆದರೆ ಇಂದು ಬಣ್ಣ ಹಾಗೂ ನಾಲಿಗೆ ಋಚಿಗಾಗಿ, ಪೌಷ್ಠಿಕಾಂಶಗಳಿಲ್ಲದ ಆಹಾರ ತಿಂದು ಅಲ್ಪಾಯಿಗಳಾಗುತ್ತಿದ್ದಾರೆ. ಆದ್ದರಿಂದ ಸಿರಿಧಾನ್ಯಗಳ ಬಳಕೆ ಪ್ರಚಲಿತವಾಗುತ್ತದೆ ಎಂದರು.

ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ, ಜಿಲ್ಲೆಯ ಬಾದಾಮಿ, ಹುನಗುಂದ ಹಾಗೂ ಬಾಗಲಕೋಟೆಗಳಲ್ಲಿ ಸಿರಿಧಾನ್ಯಗಳನ್ನು ಅಽಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಮುಂದೆ ಇವುಗಳಿಗೆ ಉತ್ತೇಜನ ನೀಡಿ ಹೆಚ್ಚು ಉತ್ಪನ್ನ ಬರುವಂತೆ ಮಾಡುವುದು ಅವಶ್ಯವಾಗಿದೆ. ಮಳೆಯ ಆಶ್ರಿತ ಸಿರಿಧಾನ್ಯವಾಗಿದ್ದರಿಂದ ಹೆಚ್ಚಿನ ನೀರಿನ ಅವಶ್ಯಕತೆ ಇರುವದಿಲ್ಲ. ಕೃಷಿಗೆ ಹೆಚ್ಚಿನ ಖರ್ಚು ಇಲ್ಲ. ಆದ್ದರಿಂದ ಕಬ್ಬು ಸೇರಿದಂತೆ ಕೇವಲ ವಾಣಿಜ್ಯ ಬೆಳೆಗಳನ್ನು ಬೆಳೆಯದೇ ಉತ್ತಮ ಜೀವನಕ್ಕಾಗಿ ಬದುಕಲು ಅವಶ್ಯವಾಗಿರುವ ಪೌಷ್ಠಿಕಾಂಶಗಳನ್ನು ಹೆಚ್ಚು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲು ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಸಿದ್ದಪ್ಪ ಬಿದರಿ ಮಾತನಾಡಿ, ನಮ್ಮ ದೇಶ ಕೃಷಿ ಪ್ರಧಾನವಾಗಿದ್ದು, ಇಂದಿನ ಯುವಕರು ಕೃಷಿಯತ್ತ ಒಲವು ತೋರಬೇಕಾಗಿರುವುದು ಅವಶ್ಯವಾಗಿದೆ. ಅಕ್ಷರ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನ ಅವಶ್ಯವಾಗಿದ್ದು, ಮಕ್ಕಳಿಗೆ ಶಿಕ್ಷಣದ ಜೊತೆ ಕೃಷಿ ಚಟುವಟಿಕೆಗಳ ಬಗ್ಗೆ ಪೋಷಕರು ಆಸಕ್ತಿ ಮೂಡಿಸಬೇಕು. ಗುರು-ಹಿರಿಯ ಬಗ್ಗೆ ಗೌರವ ಕೊಡುವ ನೈತಿಕತೆ ಪಾಠಗಳು ಇಂದು ಅವಶ್ಯವಾಗಿವೆ. ಹಿರಿಯರು ಮಾಡಿಟ್ಟ ಆಸ್ತಿಯನ್ನು ಉಪಯೋಗಿಸಿಕೊಳ್ಳದೇ ಬೆಂಗಳೂರಿನತ್ತ ಪ್ರಯಾಣ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಉಂಟಾಗದAತೆ ಮುಂದಿನ ಜನಾಂಗಕ್ಕೆ ಎಚ್ಚರಿಕೆ ಮೂಡಿಸುವ ಕೆಲಸವಾಗಬೇಕು ಎಂದರು.

ಪರಿಣಿತ ತಜ್ಞರಾದ ಡಾ.ಚಂದ್ರಶೇಖರ ಬಿರಾದಾರ ಖುಷ್ಕಿ ಬೆಳೆಗಳಲ್ಲಿ ಸಿರಿಧಾನ್ಯಗಳ ಮಹತ್ವ ತಿಳಿಸಿಕೊಟ್ಟರೆ, ಸಿರಿಧಾನ್ಯಗಳ ಬಳಕೆ ಕುರಿತು ಡಾ.ಕಾಶಿಬಾಯಿ ಖ್ಯಾದಗಿ, ಸಾವಯವ ಕೃಷಿ ಸಿರಿಧಾನ್ಯ ಬೆಳೆಗಳ ಪೋಷಕಾಂಶಗಳ ಮಹತ್ವ ಕುರಿತು ಡಾ.ಭುವನೇಶ್ವರಿ ಹೇಳಿದರು. ಪ್ರಾರಂಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ÷್ಮಣ ಕಳ್ಳೇನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಶಶಿಧರ ಕುರೇರ, ಕೃಷಿ ಇಲಾಖೆಯ ಉಪನಿರ್ದೇಶಕ ಎಲ್.ಆಯ್.ರೂಢಗಿ, ಕೆ.ಎನ್.ಅಗಸನಾಳ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಆರ್.ಎ.ನಂದಗಾವಿ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net