ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

20kkr2(5-25 karnataka pranta krusi kulikara sanga
Published on

ಕಿಕ್ಕೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕಿಕ್ಕೇರಿ ಹೋಬಳಿ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

ನರೇಗಾ ಮಾನವ ದಿನ ಕೆಲಸ 200 ದಿನಕ್ಕೆ ಹೆಚ್ಚಿಸಿ ಕನಿಷ್ಠ 600 ರೂ. ಕೂಲಿ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿ ತಾಪಂ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಹನುಮೇಶ್ ಮಾತನಾಡಿ, ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ವ್ಯವಸ್ಥೆ ಮಾಡಬೇಕು. ಸರ್ವೇ ನಂ.6ರಲ್ಲಿ ಗುಡಿಸಲು ನಿರ್ಮಿಸಿಕೊಂಡಿರುವವರಿಗೆ ಮೂಲಸೌಲಭ್ಯ, ಹಕ್ಕುಪತ್ರ ವಿತರಿಸಬೇಕು. ಅರ್ಹರಿಗೆ ಜಾಬ್ ಕಾರ್ಡ್ ನೀಡಬೇಕು. ಬಿಸಿಎಂ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಭದ್ರತೆ, ಗುಣಮಟ್ಟದ ಆಹಾರ, ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಘಟಕದ ಅಧ್ಯಕ್ಷ ಗಂಗೇನಹಳ್ಳಿ ಗಿರೀಶ್ ಮಾತನಾಡಿ, ಚೌಡೇನಹಳ್ಳಿ, ಲಕ್ಷ್ಮೀಪುರ, ಮಾಕವಳ್ಳಿ, ಹಿರಿಕಳಲೆ, ಮಂದಗೆರೆ, ಆನೆಗೊಳ ಗ್ರಾಪಂ ಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡುತ್ತಿಲ್ಲ. ಗಂಗೇನಹಳ್ಳಿ ಗ್ರಾಮದಲ್ಲಿ ಮನೆಗಳ ಎದುರು ಚರಂಡಿ ನೀರು ನಿಲ್ಲುತ್ತಿದ್ದು ಒಳಚರಂಡಿ ಇಲ್ಲದೆ ಸಮಸ್ಯೆಯಾಗಿದೆ. ಕೂಡಲೇ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

ಉಪಾಧ್ಯಕ್ಷ ಎನ್.ಸುರೇಂದ್ರ, ಕಾರ್ಯದರ್ಶಿ ಗೋಪಾಲ್, ಉಪಾಧ್ಯಕ್ಷ ಸುರೇಶ್, ಜಯಮ್ಮ, ಲಕ್ಷ್ಮಮ್ಮ, ಶಾಂತಮ್ಮ, ಕೆಂಪಮ್ಮ, ರತ್ನಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net