ಪ್ರಸನ್ನ ರಾಮೇಶ್ವರಸ್ವಾಮಿ ರಥೋತ್ಸವ

IMG-20250408-WA0525
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿ ಹೊಳಲ್ಕೆರೆ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿತು.

ರಾಮೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮಂಗಳ ಕರಡೇವು ವಾದ್ಯದೊಂದಿಗೆ ದೇವಾಲಯದಿಂದ ಗ್ರಾಮಕ್ಕೆ ಉತ್ಸವದಲ್ಲಿ ಗ್ರಾಮ ದೇವತೆ ಮುಕ್ಕಣ್ಣೇಶ್ವರಿ ದೇವಿ ಸಮ್ಮುಖದಲ್ಲಿ ತೆರಳಿ ಮೆರವಣಿಗೆ ನಡೆಸಲಾಯಿತು. ನಂತರ ಅಲಂಕಾರಗೊಂಡಿದ್ದ ರಥದಲ್ಲಿ ಕೂರಿಸಲಾಯಿತು. ರಥದ ಗಾಲಿಗಳಿಗೆ ಪೂಜೆ ಸಲ್ಲಿಸುತ್ತಿದ್ದಂತೆ ಭಕ್ತರು ಜಯ ಘೋಷ ಹಾಕುತ್ತಾ ರಥವನ್ನು ಎಳೆದರು. ನವ ವಧು-ವರರು ಹಾಗೂ ಭಕ್ತರು ರಥಕ್ಕೆ ದವನ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net