ಪ್ರವಾಹರ ಪೀಡತ ಪ್ರದೇಶಕ್ಕೆ ಸೇವೆ

bkt-27-2
ಬಾಗಲಕೋಟೆ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಗ್ರಾಮೀಣ ಮಂಡಲದ ನೂತನ ಪದಾಧಿಕಾರಿಗಳು ವಿವಿಧ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಭಾಗೀರತಿ ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ಮುಖಂಡರಾದ ಸಂಗಣ್ಣ ಕಲಾದಗಿ, ಪ್ರಭುಸ್ವಾಮಿ ಸರಗಣಾಚಾರಿ,ರಾಜು ಮುದೇನೂರ, ಯಲ್ಲಪ್ಪ ಬೆಂಡಿಗೇರಿ ಇತರರು ಇದ್ದರು.
Published on

ಬಾಗಲಕೋಟೆ: ಈ ಸಾರಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಜಾಗೃತಿ ವಹಿಸಿ ಸೇವೆ ಮಾಡಬೇಕು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಗ್ರಾಮೀಣ ಮಂಡಲದ ನೂತನ ಪದಾಧಿಕಾರಿಗಳು ವಿವಿಧ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ಯಾವುದೆ ಕ್ಷಣದಲ್ಲಿಯೂ ಪ್ರವಾಹ ಸಂದರ್ಭ ಬರಹುದು. ಇಂಥ ಸಮಯದಲ್ಲಿ ನಮ್ಮೆಲ್ಲ ಬಿಜೆಪಿ ಕಾರ್ಯಕರ್ತರು ಜಾಗೃತರಾಗಿ ಜನರ ಸೇವೆ ಮಾಡಿ ಜನರ ಸುರಕ್ಷತೆ ಕಾಪಾಡಬೇಕು. ನಮ್ಮ ಕೇತ್ರಗಳಲ್ಲಿ ಎಲ್ಲರೂ ಸೇರಿ ಕಾರ್ಯೋನ್ಮುಖರಾಗೋಣ. ಪಕ್ಷ ಸಂಘಟನೆ ನಿರಂತರವಾಗಿರುವುದು. ನಗರ ಹಾಗೂ ಗ್ರಾಮೀಣ ಪದಾಧಿಕಾರಿಗಳಿಗೆ ಇದು ಕೆಲಸದ ಹಸ್ತಾಂತರವೆ ಒರತು ಅಽಕಾರ ಹಸ್ತಾಂತರ ಅಲ್ಲ. ಬಾಗಲಕೋಟೆ ಮತಕ್ಷೇತ್ರದಲ್ಲಿ ನಗರ ಮತ್ತು ಗ್ರಾಮೀಣ ಮಂಡಲಗಳು ಶಕ್ತಿ ಶಾಲಿಯಾಗಿವೆ. ಜಿ.ಪಂ, ತಾಪಂ ಚುನಾವಣೆಗೆ ಸನ್ನದ್ಧರಾಗಬೇಕು ಎಂದರು.

ಎಲ್ಲ ನಿತ್ಯದ ಕಾಯಕದ ಜೊತೆಗೆ ಪಕ್ಷ ಸಂಘಟನೆಗೆ ಸ್ವಲ್ಪ ಸಮಯ ಮೀಸಲಿಡಬೇಕು. ನೆಹರು ನಂತರ ೩ನೇ ಬಾರಿಗೆ ಪ್ರಧಾನಿಯಾಗಿರುವರು ಮೋದಿ ಒಬ್ಬರೆ. ಮೊನ್ನೆ ಬಜೆಟ್ ಮಂಡನೆಯಾಗಿದೆ, ಬಜೆಟ್ ಗಾತ್ರ ೪೮ ಲಕ್ಷ ಕೋಟಿ ರೂ. ದೇಶದಲ್ಲಿ ೩೨ ಲಕ್ಷ ಕೋಟಿ ಬೇರೆ ರೀತಿಯಲ್ಲಿ ಟ್ಯಾಕ್ಸ್ ಬರುತ್ತದೆ. ಅದನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಸಾಮರ್ಥ್ಯವುಳ್ಳ ಮಂತ್ರಿಗಳು ನಮ್ಮಲ್ಲಿದ್ದಾರೆ, ರಕ್ಷಣಾ ವಲಯಕ್ಕೆ ೬ ಲಕ್ಷ ಕೋಟಿ ರೂ.ಕೊಟ್ಟಿರುವುದು ಇತಿಹಾಸದಲ್ಲಿ ಇದೆ ಮೊದಲು. ಮಹಿಳೆಯರಿಗೆ ೩ ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ. ಯುವಕರಿಗೆ ಉದ್ಯೋಗವಕಾಶಕ್ಕಾಗಿ ಮುದ್ರಾಯೋಜನೆಯಲ್ಲಿ ೧೦ ಲಕ್ಷ ರೂ.ದಿಂದ ೨೦ ಲಕ್ಷ ರೂ. ವರೆಗೆ ವಿಸ್ತರಿಸಿದ್ದಾರೆ. ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಅವಽ ಮುಗಿದು ಒಂದು ವರೆ ವರ್ಷವಾಯಿತು. ಮಿಸಲಾತಿ ನೇಮಕಮಾಡಿ ಹೊಸಬರನ್ನು ಮಾಡಬೇಕು ಎನ್ನುವ ವಿಚಾರ ಸರ್ಕಾರ ಕೈ ಬಿಟ್ಟಿದೆ. ಕಾಂಗ್ರೆಸ್ ಸರ್ಕಾರ ಹಗರದಲ್ಲಿ ನಿರತವಾಗಿದೆ ಎಂದು ಟೀಕಿಸಿದರು.

ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್ ಪಾಟೀಲ ಮಾತನಾಡಿ, ಕಾರ್ಯಕರ್ತರೆ ಪಕ್ಷದ ಆಧಾರ ಸ್ಥಂಭ, ರೈತರು, ಮಹಿಳೆಯರರಿಗೆ, ಯುವಕರಿಗೆ, ಬಡವರಿಗಾಗಿ ಪ್ರಧಾನಿ ಮೋದಿಯವರ ಬಜೆಟ್‌ನಲ್ಲಿ ಅವಕಾಶ ಕೊಟ್ಟಿದ್ದಾರೆ. ೨೦೪೭ ಭಾರತ ೩ನೇ ಆರ್ಥಿಕ ದೇಶವಾಗುವಲ್ಲಿ ಯಾವುದೆ ಸಂದೇಹವಿಲ್ಲಾ, ದೇಶಾಭಿಮಾನ, ದೇಶದ ಅಭಿವೃದ್ಧಿಯೇ ಪಕ್ಷದ ಸಿದ್ದಾಂತ ಅತ ಬಿಜೆಪಿ ನಂಬಿದೆ. ಇದನ್ನು ಮುಂದುವರೆಸಿಕೊಂಡು ಹೋಗುತ್ತದೆ ಎಂದರು.

ಡಾ.ಎಂ.ಎಸ್.ದಡ್ಡೆನ್ನವರ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಭಾಗೀರತಿ ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ಮುಖಂಡರಾದ ಸಂಗಣ್ಣ ಕಲಾದಗಿ, ಪ್ರಭುಸ್ವಾಮಿ ಸರಗಣಾಚಾರಿ,ರಾಜು ಮುದೇನೂರ, ಯಲ್ಲಪ್ಪ ಬೆಂಡಿಗೇರಿ, ರಾಮಣ್ಣ ಕುರಿ, ರಂಗನಗೌಡ ಗೌಡರ, ರಂಗಪ್ಪ ದಿಡ್ಡಿಮನಿ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಶಿವಾನಂದ ಟವಳಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net