

ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ:
ರಾಜ್ಯದಲ್ಲಿ ಮಲೆನಾಡು, ಅರೇ ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಜೂನ್, ಜುಲೈನಲ್ಲಿ ವಾಡಿಕೆಗ್ಗಿಂತ ಶೆ.26 ರಷ್ಟು ಮಳೆ ಜಾಸ್ತಿ ಆಗಿದೆ. ಕೆಲವು ಜಿಲ್ಲೆಯಲ್ಲಿ ವಾಡಿಕ್ಕಿಂತ ಕಡಿಮೆ ಮಳೆಯಾಗಿದೆ. ಅನೇಕ ವರ್ಷಗಳಿಂದ ಪ್ರವಾಹಕ್ಕೆ ಗ್ರಾಮಗಳು ತುತ್ತಾಗುತ್ತಿವೆ. ಅವುಗಳಿಗೆ ಶಶ್ವಾತ ಪರಿಹಾರ ಕಲ್ಪಿಸಲು ಚರ್ಚೆ ನಡೆಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಘಟಪ್ರಭಾ ನದಿ ಪ್ರವಾಹಕ್ಕೆ ತುತ್ತಾದ ಜಿಲ್ಲೆಯ ಮುಧೋಳ ತಾಲೂಕಿನ ಯಾದವಾಡ ಬ್ರೀಡ್ಜಗೆ ಭೇಟಿ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶದ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಒಂದೇ ಸಾರಿ ಸ್ಥಳಾಂತರ ಸಾಧ್ಯವಿಲ್ಲ. ಹಂತ ಹಂತವಾಗಿ ಮಾಡಬೇಕಿದೆ. ಇದಕ್ಕೆ ರೈತರು ಭೂಮಿ ನೀಡಲು ಮುಂದಾಗಬೇಕು. ಸರ್ಕಾರದ ನಿಯಮಾವಳಿ ಬಿಟ್ಟು ಭೂಮಿ ಖರೀದಿ ಮಾಡಲು ಸಾಧ್ಯವಿಲ್ಲ. ಮಾರುಕಟ್ಟೆ ದರದಲ್ಲಿ ಭೂಮಿ ಖರೀದಿಸಲು ಸಾಧ್ಯವಿಲ್ಲ. ಎಲ್ಲದಕ್ಕೂ ಅಂತಿಮ ಸ್ವರೂಪ ನೀಡಬೇಕಿದೆ ಎಂದರು.
ಈ ಸಾರಿ ಕೊಪ್ಪಳ, ಕೋಲಾರ, ವಿಜಯ ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆ ಆಗಿಲ್ಲ. ಆದರೇ ಕರಾವಳಿ, ಕಾವೇರಿ ಜಲಾನಯನ ಪ್ರದೇಶ, ಅರೇ ಮಲೆನಾಡಿನ ಭಾಗದಲ್ಲಿ ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಬಾಗಲಕೋಟೆ , ಬೆಳಗಾವಿ ಭಾಗದಲ್ಲಿ ಪ್ರವಾಹ ಉಂಟಾಗಿದೆ. ಘಟಪ್ರಭಾ 80 ಸಾವಿರ ಕ್ಯೂಸೆಕ್, ಕೃಷ್ಣಾ 3 ಲಕ್ಷ ಕ್ಯೂಸೆಕ್ ಒಳ ಹರಿವು ಇದ್ದು, ಎರಡು ಮೂರು ದಿನಗಳಲ್ಲಿ ಪ್ರವಾಹ ತಗ್ಗಬಹುದು. ಮಹಾರಾಷ್ಟ್ರ ದಲ್ಲಿ ಮಳೆ ಮುಂದು ವರೆದಲ್ಲಿ ಕಷ್ಟವಾಗಲಿದೆ. ಸರ್ಕಾರ ಅಗತ್ಯ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 2223 ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ
ಅಂತ ಗುರುತಿಸಲಾಗಿದೆ. ಟಾಸ್ಕ ಪೋರ್ಸ ಸಮಿತಿ ರಚಸಲಾಗಿದೆ. 64 ಹಾರೈಕೆ ಕೆಂದ್ರ ಆರಂಭಿಸಲಾಗಿದ್ದು, ಈ ವರೆಗೆ 10 ಸಾವಿರ ಜನರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. 832 ಮನೆಗಳಿಗೆ ಹಾನಿಯಾಗಿದೆ. ಸಿಡಿಲಿಗೆ 8, ಮರಗಳು ಬಿದ್ದು 6, ಮನೆ ಬಿದ್ದು 14, ನೀರಿನಲ್ಲಿ ಮುಳಗಿ 12 ಜನ ಸೇರಿದಂತೆ ಒಟ್ಟು 48 ಪ್ರಾಣ ಹಾನಿ ಸಂಭವಿಸಿದೆ ಎಂದು ತಿಳಿಸಿದರು.
ಲಾಠಿ ಚಾರ್ಚಗೆ ಸೂಚನೆ:
ನದಿಗೆ ಯಾರು ಹೋಗಬಾರದು. ಇದರಿಂದ ಜೀವಹಾನಿ ಸಂಭವ ಜಾಸ್ತಿ ಇದ್ದು, ಹಾಗೆನಾದರು ಸಾರ್ವಜನಿಕರ ನದಿಪಾತ್ರಕ್ಕೆ ಇಳಿಯುವ ಪ್ರಯತ್ನವನ್ನು ಮಾಡಿದಲ್ಲಿ ಲಾಠಿ ರುಚಿ ತೋರಿಸಲು ಎಸ್ಪಿ, ಡಿಸಿಗಳಿಗೆ ಸೂಚನೆ ನೀಡಲಾಗಿದೆ. ನಮಗೆ ಪ್ರಾಣ ರಕ್ಷಣೆ ಮುಖ್ಯ. ಅವರನ್ನು ನಂಬಿ ಕುಟುಂಬಗಳು ಬದುಕುತ್ತೀವೆ ಎಂದರು.
ಸದ್ಯ 44 ಸಾವಿರ ಹೆಕ್ಟೇರ್ ಬೆಳೆ ಹಾನಿ:
ಪ್ರವಾಹಕ್ಕೆ 2019 ರಲ್ಲಿ 272 ಜನ, 2022 ರಲ್ಲಿ 249 ಜನರ ಜೀವ ಹಾನಿಯಾಗಿತ್ತು. 2019 ರಲ್ಲಿ ೯ ಲಕ್ಷ ಹೆಕ್ಟೇರ್, 2022 ರಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಹಾನಿಯಾಗಿತ್ತು, ಪ್ರಸಕ್ತ ವರ್ಷ 44 ಸಾವಿರ ಹೆಕ್ಟೇರ್ ಪ್ರದೇಶ ಬೆಳೆಹಾನಿಯಾಗಿದೆ. ಇದು ಪ್ರವಾಹ ಕಡಿಮೆಯಾದ ಬಳಿಕ ಹಾನಿ ಪ್ರಮಾಣ ಜಾಸ್ತಿ ಆಗಲಿದೆ ಎಂದರು.