

ಸೋಮವಾರಪೇಟೆ: ತಾಲೂಕು ಹೋಂ ಸ್ಟೇ ಆ್ಯಂಡ್ ಟೂರಿಸಂ ಅಸೋಸಿಯೇಷನ್ ವತಿಯಿಂದ ಹಾರಂಗಿ ಜಲಾಶಯ ಅಣೆಕಟ್ಟಿನ ರಸ್ತೆ ಮುಂಭಾಗದಲ್ಲಿ ಪ್ರವಾಸಿ ಸ್ಥಳಗಳ ಸೂಚನಾ ಫಲಕವನ್ನು ಅಳವಡಿಸಲಾಯಿತು.
ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ರೋಹಿತ್ ಫಲಕವನ್ನು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳನ್ನು ಅಸೋಸಿಯೇಷನ್ ನಡೆಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಇರುವ ಸ್ಥಳದಲ್ಲಿ ಫಲಕಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಅಭಿನಂದ್, ಪ್ರಮುಖರಾದ ವಿಠಲ್, ಹೇಮಂತ್, ಲೋಹಿತ್ ಮೂದ್ರವಳ್ಳಿ, ಸದಸ್ಯರು ಇದ್ದರು.