ಪ್ರಪಾತಕ್ಕೆ ಬಿದ್ದ ಲಾರಿ : ಇಬ್ಬರು ಸಾವು

IMG-20220917-WA0094.jpg
Published on

ಯಲ್ಲಾಪುರ:ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಹೋಗಿ ಬಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅರಬೈಲ್ ಘಟ್ಟದ ಯೂಟರ್ನ್ ಬಳಿ ಶನಿವಾರ ನಡೆದಿದೆ.
ಗ್ರಾನೈಟ್ ತುಂಬಿಕೊಂಡು ಆಂಧ್ರಪ್ರದೇಶದಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ಲಾರಿ, ಅರಬೈಲ್ ಘಟ್ಟದಲ್ಲಿ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಮರಕ್ಕೆ ಡಿಕ್ಕಿ ಹೊಡೆದು, 100 ಅಡಿಗಿಂತ ಹೆಚ್ಚು ಆಳದ ಪ್ರಪಾತಕ್ಕೆ ಉರುಳಿದೆ. ಗ್ರಾನೈಟ್ ಹಾಗೂ ಲಾರಿ ಸಂಪೂರ್ಣ ಪುಡಿ ಪುಡಿಯಾಗಿದೆ.
ಲಾರಿಯ ಚಾಲಕ ಹಾಗೂ ನಿರ್ವಾಹಕರು ಮೃತಪಟ್ಟಿದ್ದು, ಇಬ್ಬರ ದೇಹಗಳು ಗುರುತೂ ಸಿಗದ ರೀತಿಯಲ್ಲಿ ಛಿದ್ರ ಛಿದ್ರವಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಕಕ್ಕೆ ಉರುಳಿದ ಲಾರಿ ಹಾಗೂ ಮೃತದೇಹಗಳನ್ನು ಮೇಲಕ್ಕೆತ್ತುವುದು ಸವಾಲಾಗಿದೆ.
ಅರಬೈಲ್ ಘಟ್ಟದ ಯೂಟರ್ನ್ ಬಳಿ ಕಳೆದ ವರ್ಷ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿದು 15 ದಿವಸಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದರು. ಅದೇ ಸ್ಥಳದಲ್ಲಿ ಲಾರಿ ಪಲ್ಟಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net