

ಬಾಗಲಕೋಟೆ: ಭಾರತ ಮತ್ತು ಅದರ ಘನತೆಯನ್ನು ಸಶಕ್ತಗೊಳಿಸಿ ೨೦೨೪ ರಲ್ಲಿ ಮೊತ್ತಮ್ಮೆ ಮೋದಿಜಿ ಅವರನ್ನು ಅಧಿಕಾರಕ್ಕೆ ತರೋಣ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಶನಿವಾರ ಬಿಜೆಪಿ ವಿಧಾನಸಭಾ ಮತಕ್ಷೇತ್ರ ಬಾಗಲಕೋಟೆ ವತಿಯಿಂದ ನಡೆದ ಲೋಕಸಭಾ ಹಿನ್ನೆಲೆ ಬಿಜೆಪಿ ಬೂತ್ ಸಶಕ್ತಿರಣದ ಅಭಿಯಾನದ ಪೂರ್ವ ಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ದೇಶದ ಪ್ರತಿಯೊಂದು ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಯೋಜನೆ ರೂಪಿಸಲಾಗಿದೆ. ಅವುಗಳನ್ನು ತಲುಪಿಸುವ ಕೆಲಸವಾಗಬೇಕು. ಪ್ರತಿ ಬೂತ್ ಗಳಲ್ಲಿ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಿ ಬೂತ್‌ಗಳನ್ನು ಗಟ್ಟಿಗೊಳಿಸಬೇಕು ಎಂದರು.
ವಿ.ಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ವಿಧಾನ ಸಭಾ ಕ್ಷೇತ್ರದ ಪ್ರತಿ ಬೂತ್ ಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಕೇಂದ್ರದ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಬೇಕು. ಕಳೆದ ೧೦ ವರ್ಷದಲ್ಲಿ ಆಗಿರುವ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆಣ್ಣವರ, ಬೆಳಗಾವಿ ವಿಭಾಗೀಯ ಸಹ ಪ್ರಭಾರಿ ಬಸವರಾಜ್ ಯಂಕಂಚಿ, ಗ್ರಾಮೀಣ ಮಂಡಳದ ಅಧ್ಯಕ್ಷ ಸುರೇಶ ಕೊಣ್ಣೂರ, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ಮುಖಂಡರಾದ ಸತ್ಯನಾರಾಯಣ ಹೇಮಾದ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ರಾಜು ಮುದೇನೂರ, ಬಸವರಾಜ ಅವರಾದಿ, ವಿಜಯ ಚಟ್ಟರಕಿ, ಶಂಕರ ಗಲಗ, ಸಂಗಪ್ಪ ಸಜ್ಜನ ಇದ್ದರು.