ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ನಿಮಿತ್ಯ

bkt-18-11
ಬಾಗಲಕೋಟೆ ನಗರದ ಪಾಂಜರ ಫೋಳ ಸಂಸ್ಥೆಯ ಗೋ ಶಾಲೆಯಲ್ಲಿ ಬುಧವಾರ ಗೋ ಪೂಜೆ ನಡೆಯಿತು. ಮಾಜಿ ಶಾಸಕ ವೀರಣ್ಣ ಚರಂತಿಮಠ, ರೈತ ಮೋರ್ಚಾ ಅಧ್ಯಕ್ಷ ದೂಳಪ್ಪ ಕೊಪ್ಪದ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಶಿವಾನಂದ ಟವಳಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ ಇತರರು ಇದ್ದರು.
Published on

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ನಿಮಿತ್ತ ನಗರದ ಪಾಂಜರ ಫೋಳ ಸಂಸ್ಥೆಯ ಗೋ ಶಾಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ರೈತ ಮೋರ್ಚಾ ವತಿಯಿಂದ ಗೋ ಪೂಜೆ ನಡೆಯಿತು.

ಬುಧವಾರ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಅವುಗಳಿಗೆ ಮೇವು, ಅಕ್ಕಿ, ಬೆಲ್ಲ, ಧಾನ್ಯಗಳನ್ನು ನೀಡಿ ಗೋತಾಯಿ ಒಡಲು ತುಂಬಿಸಿದರು. ನಂತರ ನಡೆದ ಸಸಿ ನಡೆಯುವ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ರೈತ ಮೋರ್ಚಾ ಅಧ್ಯಕ್ಷ ದೂಳಪ್ಪ ಕೊಪ್ಪದ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಶಿವಾನಂದ ಟವಳಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಸತ್ಯನಾರಾಯಣ ಹೆಮಾದ್ರಿ, ಸಂಗಯ್ಯ ಸರಗಣಾಚಾರಿ, ವಿರೇಶ ಅಥಣಿ, ಮಹೇಶ ಅಂಗಡಿ, ಮುರಗೇಶ ಕುಂದರಗಿ, ಸುರೇಶ ಮಜ್ಜಗಿ, ವೀರಣ್ಣ ಹಳೇಗೌಡರ, ಸುಜಾತ ಶಿಂಧೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net