ಪ್ರತ್ಯೇಕ ಹಿಂದು ಬಾಂಗ್ಲಾದೇಶ ಆಗಲಿ

download
ಬಾಗಲಕೋಟೆ
Published on

ಬಾಗಲಕೋಟೆ: ಬಾಂಗ್ಲಾದೇಶದಲ್ಲಿ ಇಸ್ಕಾನ್ ಅಧ್ಯಕ್ಷ ಚಿನ್ಮೋಯ್ ಕೃಷ್ಣದಾಸ್ ಬಂಧನ ಮಾಡಿರುವ ವಿಚಾರವಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ಕಿಡಕಾರಿದ್ದು, ಬಾಂಗ್ಲಾದೇಶವನ್ನು ಒಡೆದು ಹಿಂದುಗಳಿಗಾಗಿ ಪ್ರತ್ಯೇಕ ಹಿಂದು ಬಾಂಗ್ಲಾದೇಶ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೂಡಲೇ ಬಾಂಗ್ಲಾದೇಶದ ಜೊತೆಗಿನ ಎಲ್ಲ ವ್ಯಾಪಾರ ವಹಿವಾಟನ್ನು ಬಂದ್ ಮಾಡಿ. ನಮ್ಮಿಂದಾಗಿ ಹುಟ್ಟಿರುವ ಬಾಂಗ್ಲಾದೇಶ ಇವತ್ತು ನಮ್ಮ ಮೇಲೆ ಕೆರಳಿತ್ತಿದೆ. ಅಲ್ಲಿ ಲಕ್ಷಾಂತರ ಜನರು ಸಾಯುತ್ತಿದ್ದಾರೆ. ಅಪಮಾನ ಆಗುತ್ತಿದೆ. ಇನ್ನೂ ಸಹ ನಾವು ಸಹನೆ ಎಂದರೆ ಹೇಗೆ? ಕೇಂದ್ರ ಸರ್ಕಾರವನ್ನು ನಾವು ಗೆಲ್ಲಿಸಿ ಕಳುಹಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಮುತಾಲಿಕ್, ನೀವು(ಬಿಜೆಪಿ ಸರ್ಕಾರ) ಹಿಂದುಗಳ ರಕ್ಷಣೆ ಮಾಡದಿದ್ದರೆ ಮತ್ತಾö್ಯರು ಮಾಡುತ್ತಾರೆ ಎಂದು ಕೇಳಿದರು.

ಸಬಕಾ ಸಾತ್ ಸಬಕಾ ವಿಕಾಸ್ ಎನ್ನುವುದನ್ನು ಬಂದ್ ಮಾಡಿ. ಇದು ಹಿಂದುಸ್ತಾನ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಅಕ್ಕಪಕ್ಕದಲ್ಲಿ ಮಿಯಾವ್ ಎನ್ನುತ್ತಾ ಬೆಕ್ಕಿನ ಆಟ ಆಡುತ್ತಿರುವ ಪಾಕಿಸ್ತಾನ್, ಬಾಂಗ್ಲಾದೇಶ ಹುಟ್ಟಡಗಿಸಬೇಕು. ಇಲ್ಲವಾದರೆ ಬಹಳ ಗಂಭೀರ ಪರಿಸ್ಥಿತಿ ಬರುತ್ತದೆ. ಮುಂದುವರೆದು ನಾವೆಲ್ಲ ನಿಮ್ಮ ಸರ್ಕಾರದ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚಿನ್ಮೋಯ್ ಕೃಷ್ಣದಾಸ್ ಅವರನ್ನು ಕಾನೂನುಬಾಹಿರವಾಗಿ ಬಂಽಸಲಾಗಿದೆ. ಹಿಂದುಗಳ ಮೇಲೆ ದೌರ್ಜನ್ಯ ಮೊದಲಿನಿಂದಲೂ ನಡೆಯುತ್ತಾ ಬಂದಿದೆ. ೧೯೭೧ರಿಂದ ಹಿಡಿದ ೫೦ ವರ್ಷದಲ್ಲಿ ಹಿಂದುಗಳ ಮೇಲೆ ೨ ಸಾವಿರ ದಾಳಿಗಳು ಆಗಿವೆ. ಬೇರೆ ಯಾವುದೇ ಗಲಾಟೆಯಾದರೂ ಹಿಂದುಗಳ ಮೇಲೆ ದಾಳಿ ನಡೆಸುವುದು. ದೇವಸ್ಥಾನಗಳ ಮೇಲೆ ದಾಳಿ, ಸ್ತ್ರೀಯರ ಮೇಲೆ ಬಲತ್ಕಾರ, ಅಪಹರಣ ಮಾಡುತ್ತಾರೆ. ಈ ರೀತಿ ೩ ಲಕ್ಷ ಹಿಂದುಗಳನ್ನು ಕೊಂದು ಹಾಕಿದ್ದಾರೆ ಎಂದು ಆರೋಪ ಮಾಡಿದರು.

ಚಿನ್ಮೋಯ್ ಕೃಷ್ಣದಾಸ್ ಬಂಧನದ ಬಗ್ಗೆ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಖಂಡಿಸಿದ್ದನ್ನು ನಾನು ಸ್ವಾಗತಿಸುತ್ತೇನೆ. ಆ ರೀತಿ ಖಂಡನೆಯನ್ನು ಕೇಂದ್ರದಲ್ಲಿ ಯಾರೂ ಮಾಡಿಲ್ಲ. ಹಿಂದು ಸಮಾಜದ ಆಕ್ರೋಶ ಹೆಚ್ಚಾಗುತ್ತಿದೆ. ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ನಾವು ಒಂದು ಲಕ್ಷ ಸಹಿ ಅಭಿಯಾನ ಮಾಡಿ ಕಳುಹಿಸುತ್ತೇವೆ. ಪ್ರತ್ಯೇಕ ಹಿಂದು ಬಾಂಗ್ಲಾದೇಶ ನಿರ್ಮಾಣ ಮಾಡಿ ಎಂದು ಒತ್ತಾಯಿಸಿದರು.

ರಾಜ್ಯ ಬಿಜೆಪಿಯಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ವಿಜಯೇಂದ್ರ ನಡುವಿನ ಸಂಘರ್ಷವು ಅವರ ಪಕ್ಷದ ವಿಚಾರ. ನಾನು ಬಿಜೆಪಿಯವನಲ್ಲ. ಆದರೆ, ಅವರಿಬ್ಬರ ಜಗಳದಿಂದಲ್ಲಿ ಹಿಂದುತ್ವ, ಹಿಂದು ಸಮಾಜಕ್ಕೆ ಏಟು ಬೀಳುತ್ತಿದೆ. ಇದನ್ನು ಇಬ್ಬರು ಅರ್ಥ ಮಾಡಿಕೊಳ್ಳಬೇಕು. ಅಽಕಾರದ ದಾಹ, ಭ್ರಷ್ಟ ವ್ಯವಸ್ಥೆಯಿಂದ ಕಾರ್ಯಕರ್ತರು ಹಾಗೂ ಸಿದ್ದಾಂತ ಎಲ್ಲವನ್ನು ಹಾಳು ಮಾಡುತ್ತಿದ್ದೀರಿ. ದೇಶ, ಧರ್ಮ, ಸಂಘಟನೆ, ಹಿಂದುತ್ವದ ಬಗ್ಗೆ ಸ್ವಲ್ಪ ವಿಚಾರ ಮಾಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net