ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ

SKATING
Published on

ಕಲಬುರಗಿ: ನ್ಯಾಷನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ರೋಲರ್ ಸ್ಕೇಟಿಂಗ್ ಫೆಡರೇಷನ್ ಆಪ್ ಇಂಡಿಯಾದಿಂದ ಆಯೋಜಿಸಿರುವ ನಾಲ್ಕು ದಿನಗಳ ಸಿಬಿಎಸ್‌ಇ ದಕ್ಷಿಣ ವಲಯ-೨ ಸ್ಕೇಟಿಂಗ್ ಚಾಂಪಿಯನ್‌ಷಿಪ್ ಟೂರ್ನಿಗೆ ಭಾನುವಾರ ತೆರೆ ಬಿದ್ದಿತು.

ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವದೊಂದಿಗೆ ಆಟೋಟಗಳಲ್ಲಿ ಪಾಲ್ಗೊಳ್ಳಬೇಕು. ದಕ್ಷಿಣ ವಲಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆ ಕಲಬುರಗಿಯಲ್ಲಿ ಆಯೋಜಿಸಿರುವುದು ಖುಷಿ ತಂದಿದೆ. ನಮ್ಮಲ್ಲಿನ ಪ್ರತಿಭೆಗಳಿಗೂ ಸ್ಪೂರ್ತಿಯಾಗಲಿದೆ ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರೂ ಆದ ಶಾಲೆ ಅಧ್ಯಕ್ಷ ಶಶೀಲ್ ನಮೋಶಿ, ಉಪಾಧ್ಯಕ್ಷ ವೀರಶೆಟ್ಟಿ ಖೇಣಿ, ಕಾರ್ಯದರ್ಶಿ ಸುರೇಶ ಬುಲಬುಲೆ, ಖಜಾಂಚಿ ಡಾ.ಸಂಪತಕುಮಾರ್ ಲೋಯಾ, ಜಂಟಿ ಕಾರ್ಯದರ್ಶಿ ಚಂದ್ರಶೇಖರ ರೆಡ್ಡಿ, ನಿರ್ದೇಶಕರಾದ ಗಣೇಶ ತಪಾಡಿಯಾ, ಎಂ.ಡಿ.ಮೋಹಿನೋದ್ದಿನ್, ಸುನೀಲಕುಮಾರ ಪಾಟೀಲ್, ಸಂಪತ್‌ಕುಮಾರ ಗಿಲ್ಡಾ, ಡಾ.ನಳಿನಿ ಎ., ವಿಶ್ವನಾಥ ಖೂಬಾ, ಕೇಶವರಾವ್ ನಿಟ್ಟೂರಕರ್, ಸಂಗಮೇಶ ಮಹಾಗಾಂವಕರ್, ಪ್ರಫುಲ್ ನಮೋಶಿ, ವಿಷ್ಣುದಾಸ ತಪಾಡಿಯಾ, ಲಕ್ಷಣ ಪತಂಗೆ ಇತರರಿದ್ದರು.

ಕರ್ನಾಟಕ, ಮಹಾರಾಷ್ಟç, ಗೋವಾ, ಕೇರಳ ರಾಜ್ಯದ ೩೮೦ ಶಾಲೆಗಳ ೧೬೪೪ ಮಕ್ಕಳು ಪಾಲ್ಗೊಂಡಿದ್ದರು. ಮಹಾರಾಷ್ಟç ಹಾಗೂ ಗೋವಾದಿಂದ ೭೨೩, ಕರ್ನಾಟಕ ೬೪೯, ಕೇರಳದಿಂದ ೨೭೨ ವಿದ್ಯಾರ್ಥಿಗಳಿದ್ದಾರೆ. ೩೦೦ ಮೀ, ೫೦೦ ಮೀ ಹಾಗೂ ೧೦೦೦ ಮೀ ಸ್ಕೇಟಿಂಗ್ ಸ್ಪರ್ಧೆಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net