

ಬಾಗಲಕೋಟೆ: ದೇಶದಲ್ಲಿರುವ ಪ್ರತಿಯೊಬ್ಬರಿಗೂ ಅವಶ್ಯಕತೆಗಳಿರುವ ಕಾನೂನಿನ ಅರಿವು ಹಾಗೂ ಪರಿಪಾಲನೆ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದ್ಯಾವಪ್ಪ ಎಸ್.ಬಿ ಅವರು ಹೇಳಿದರು.
ಅವರು ಜಿಲ್ಲಾ ನ್ಯಾಯಾಲಯ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ ಹಾಗೂ ಬಿ.ವ್ಹಿ.ವ್ಹಿ.ಸಂಘದ ಬಸವೇಶ್ವರ ಬಾಲಕಿಯರ ಪ್ರೌಡಶಾಲೆಯ ಸಹಯೊಗದಲ್ಲಿ ಶುಕ್ರವಾರ ಹಮ್ಮಿಕೊಂಡ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮಕ್ಕಳ ಹಕ್ಕುಗಳು ಹಾಗೂ ಪೋಕ್ಸೊ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮಕ್ಕೆ ಜ್ಯೋತಿ ಬೇಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಈ ನೆಲದ ಕಾನೂನಿ ಪರಿಪಾಲನೆ ಅಗತ್ಯವಾಗಿದ್ದು, ದೇಶದಲ್ಲಿರುವ ಪ್ರತಿಯೊಬ್ಬರು ಅವಶ್ಯಕತೆಗಳಿರುವ ಕಾನೂನುಗಳನ್ನು ತಿಳಿದುಕೊಳ್ಳಬೇಕು, ವಿದ್ಯಾರ್ಥೀಗಳು ಮಕ್ಕಳು ಈ ದೇಶದ ಆಸ್ತಿಯಿಂದಂತೆ, ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ವಿದ್ಯಾರ್ಥಿಗಳು ಕೂಡಾ ತಂದೆ-ತಾಯಿ ಹಾಗೂ ವಿದ್ಯ ಕಲಿಸಿದ ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಹೇಸರುಗಳನ್ನು ಉಳಿಸಿ ಬೇಳೆಸುವ ನಿಟ್ಟಿನಲ್ಲಿ ಉತ್ತಮ ನಾಗರಿಕರಾಗಬೇಕಾದ ಅಗತ್ಯತೆ ಇದೆ, ದೇಶದಲ್ಲಿ ಬಾಲ್ಯವಿವಾಹ, ಮಾನವ ಕಳ್ಳಸಾಗಾಣಿಕೆ,ವೈಶ್ಯಾವಾಟಿಕೆಯಂತ, ಸೈಬರ್ ಕ್ರೈಂ ಗಳಂತ ಅನೇಕ ಪಿಡುಗುಗಳು ಇರುವುದರಿಂದ ವಿದ್ಯಾರ್ಥಿನಿಯರು ತಮ್ಮ ಸ್ವಯಂ ರಕ್ಷಣೆಗಾಗಿ ಕಾನೂನಿನ ಅರಿವು ಕೂಡಾ ಮುಖ್ಯವಾಗಿದ್ದು, ದೇಶದಲ್ಲಿ ಮಗು ಹುಟ್ಟುವ ಮುಂಚೆಯಿAದ ಸಾಯುವರೆಗೂ ಅನೇಕ ಕಾನೂನುಗಳಿದ್ದು ಮನುಷ್ಯನಿಗೆ ಅವಶ್ಯವಿರುವ ಕಾನೂನುಗಳನ್ನು ತಿಳಿದು ಪರಿಪಾಲನೆ ಮಾಡಬೇಕು ಎಂದರು.
ಉಪ ಪ್ರಧಾನ ಕಾನೂನು ಅರಿವು ಅಭಿರಕ್ಷಕರಾದ ಪ್ರಶಾಂತ ನಾರಾಯಣಕರ ಅವರು ತಮ್ಮ ಉಪನ್ಯಾಸದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮಕ್ಕಳ ಹಕ್ಕುಗಳು ಹಾಗೂ ಪೋಕ್ಸೊ ಕಾಯ್ದೆ ಕುರಿತು ಸಹವಿಸ್ತಾರವಾಗಿ ಮಾಹಿತಿ ನಿಡಿದರು.
ಬಾಲಕೀರಯರ ಪ್ರೌಡಶಾಲಾ ಮುಖ್ಯಗುರುಗಳಾದ ಡಿ.ವಿ.ಶಿಕ್ಕೇರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿ ವಿದ್ಯಾರ್ಥೀನಿಯರು ಈ ಎಲ್ಲ ಕಾನೂನಿನ ಅರಿವಿನ ಜೊತೆಗೆ ಅವುಗಳನ್ನು ಪರಿಪಾಲಿಸುವುದುರ ಜೋತೆಗೆ ತಮ್ಮ ಸುತ್ತಮುತ್ತಲಿರುವ ಅನೇಕ ಮಹಿಳೆಯರಿಗೆ ತಮ್ಮಿಂದ ಕಾನೂನುಗಳ ಬಗ್ಗೆ ಅರಿವು ಮೂಡಿಸಿ ಎಂದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಎಸ್.ಆಲೂರು ಇದ್ದರು, ಜಿ.ಎಸ್.ನರೆಗಲ್ ಸ್ವಾಗತಿಸಿದರು,ಎಂ.ಆರ್.ಮನಹಳ್ಳಿ ವಂದಿಸಿದರು, ಮಲ್ಲು ಹಡಪದ ಕಾರ್ಯಕ್ರಮ ನೀರೂಪಿಸಿದರು. ಪ್ರೌಡಶಾಲೆಯ ವಿದ್ಯಾರ್ಥಿನಿಯುರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.