

ಚನ್ನರಾಯಪಟ್ಟಣ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ನವೋದಯ ಸಂಸ್ಥೆ ವಿದ್ಯಾರ್ಥಿಗಳನ್ನು ನವೋದಯ ಕಲಾ ಸಂಘದ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತಾಡಿದ ಕಲಾಸಂಘದ ಕಾರ್ಯದರ್ಶಿಸಿ.ಬಿ. ಮಂಜೇಗೌಡ, ನವೋದಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಲವಾರು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಈಗ ಹೆಚ್ಚು ಅಂಕ ಪಡೆದು ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದವರು ಸಂಸ್ಕಾರವಂತ ಜೀವನ ಸಾಗಿಸಲಿ ಎಂದು ಹರಸಿದರು.
ಕಲಾ ಸಂಘದ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್ ಮಾತನಾಡಿ, ನವೋದಯ ಸಂಸ್ಥೆಯಲ್ಲಿ ಓದಿದವರು ಶಾಸಕರು, ಸಚಿವರು, ವೈದ್ಯರು, ಇಂಜಿನಿಯರ್ ಸೇರಿದಂತೆ ಪ್ರಮುಖ ಹುದ್ದೆ ಅಲಂಕರಿಸಿದ್ದಾರೆ. ಅವರಂತೆ ನೀವು ಕೂಡ ಉನ್ನತ ಹುದ್ದೆ ಅಲಂಕರಿಸಿ ಎಂದರು.
ವಿದ್ಯಾರ್ಥಿಗಳಾದ ಎಚ್.ಪಿ.ನಾಗಾರ್ಜುನ, ಪಿ.ದಿಶಾ, ಪೂರ್ವಿಕಾ, ಕೆ .ಆರ್.ಧನುಷ್, ಬಿ.ಎಂ.ಲಕ್ಷ್ಮೀ, ಎಚ್.ಎಸ್.ಬಾಂಧವ್ಯಾ, ಎಚ್.ಜಿ.ಸಿಂಚನಾ, ಜಿ.ಲೋಕೇಶ್, ಫಾತಿಮಾ, ಎನ್.ಆರ್. ನಿಶಾ ಅವರನ್ನು ಸನ್ಮಾನಿಸಲಾಯಿತು.
ಕಲಾ ಸಂಘದ ಗೌರವಾಧ್ಯಕ್ಷ ಡಾ.ಶೇಷಶಯನ, ನವೋದಯ ಸಂಸ್ಥೆಯ ಪ್ರಾಂಶುಪಾಲ ಚೆನ್ನಯ್ಯ, ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಎಸ್.ಮಲ್ಲೇಶ್, ಎಚ್.ಎಂ.ರಮೇಶ್, ಸೀತಾರಾಮ ನಾಯಕ್, ಉಮೇಶ್ ಇತರರಿದ್ದರು.