

ಕಲಬುರಗಿ: ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘ ಜಿಲ್ಲಾ ಶಾಖೆ ಹಾಗೂ ಜಿಲ್ಲಾ ಕುರುಬಗೊಂಡ ನೌಕರರ ಸಂಘದ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.೮೦ಕ್ಕಿಂತ ಅಂಕ ಪಡೆದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಕರೆಯಲಾಗಿದೆ ಎಂದು ಸಂಘದ ಜಿಲ್ಲಾಧ್ಯP್ಷÀ ಗುರುನಾಥ ಪೂಜಾರಿ ತಿಳಿಸಿದರು. ಜಿಲ್ಲೆಯ ಕುರುಬ, ಕುರುಬಗೊಂಡ, ಕಾಡುಕುರುಬ, ಜೇನುಕುರುಬ, ಹಾಲುಮತ, ಗೊಂಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು.೨೮ರಂದು ನಗರದ ಡಾ.ಎಸ್.ಎಂ.ಪAಡಿತ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜು.೨೫ರೊಳಗೆ ವಿದ್ಯಾರ್ಥಿಗಳು ಅಂಕ ಪಟ್ಟಿ ಪ್ರತಿ ಸಲ್ಲಿಸಬೇಕು. ಮಾಹಿತಿಗೆ ನೌಕರರ ಸಂಘದ ಅಧ್ಯP್ಷÀ ಮೊ.೯೫೩೫೮೬೦೬೪೧, ಚಿಂಚೋಳಿ-೯೯೦೧೪೧೫೫೯೦, ಅÀಜಲಪುರ-೯೫೯೧೬೩೫೧೨೮, ಆಳಂದ-೯೭೩೧೪೨೨೫೬೭, ಕಮಲಾಪುರ-೮೧೩೯೯೫೮೯೭೪, ಜೇವರ್ಗಿ-೯೪೪೯೮೩೪೦೦೦, ಕಲಬುರಗಿ ನಗರ-೯೯೮೬೪೪೧೧೮೨, ಯಡ್ರಾಮಿ-೯೯೦೨೬೫೮೨೫೮, ಚಿತ್ತಾಪುರ-೯೦೦೮೪೦೫೯೧೬, ಸೇಡಂ-೯೪೪೯೩೫೩೪೧೫, ಕಾಳಗಿ-೯೯೦೨೫೬೦೩೯೦, ಶಹಾಬಾದ್-೯೮೮೦೯೭೩೦೪೩ಕ್ಕೆ ಸಂಪರ್ಕಿಸಬಹುದು ಎಂದು ವಿವರಿಸಿದರು. ನಾಗೇಂದ್ರಪ್ಪ ಪೂಜಾರಿ, ಶಿಲಿಂಗಪ್ಪ ವಗ್ಗಿ, ನಿರ್ಮಲಾ ಬರಗಾಲಿ ಇತರರಿದ್ದರು.