ಪ್ರತಿಪಕ್ಷಗಳಿಗೆ ಜನರಿಂದಲೇ ತಕ್ಕ ಉತ್ತರ : ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆ

MAG
Published on

ಮಾಗಡಿ  : ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗೆ ಶುಭಕೋರುತ್ತೇನೆ. ಆದರೆ, ಅಂತಿಮವಾಗಿ ಜನರೇ ತೀರ್ಮಾನ ಮಾಡುತ್ತಾರೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ಪಟ್ಟಣದ ಕರಗದಹಳ್ಳಿ ಕಾಳಗಟ್ಟಮ್ಮ ಜಾತ್ರಾಮಹೋತ್ಸವದಲ್ಲಿ ಮಾತನಾಡಿ, ಪ್ರತಿನಿತ್ಯ ಬಳಸುವ ವಸ್ತುಗಳ ಬೆಲೆ ಬೆಲೆ ಏರಿಕೆ ಮಾಡಿರುವರು ಯಾರು ಎಂದು ರಾಜ್ಯದ ಜನರಿಗೆ ಗೊತ್ತಿದೆ. ಅವರು ಮಾಡಿದ ಪಾಪದ ಕೆಲಸವನ್ನು ಮರೆಮಾಚಲು ನಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯದ ಜನರು ಮತ್ತೊಮ್ಮೆ ತಕ್ಕ ಬುದ್ಧಿ ಕಲಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಜನಪರವಾದ ಕೆಲಸಮಾಡಿಕೊಂಡು ಬಂದಿರುವುದರಿಂದ ರಾಜ್ಯದಲ್ಲಿ ನಡೆದ ಉಪಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪ್ರತಿ ಪಕ್ಷದವರಿಗೆ ಬುದ್ಧಿ ಕಲಿಸಿದ್ದಾರೆ ಎಂದು ಟಾಂಕ್ ನೀಡಿದರು.

ಹಾಲು ಉತ್ಪಾದಕರು ಸಾಕಷ್ಟು ಸಂಕಷ್ಟದಲ್ಲಿದ್ದು, ಪಶು ಆಹಾರದ ಬೆಲೆ ಏರಿಕೆ ಮೂಲಕ ಅವರ ನೆರವಿಗೆ ಧಾವಿಸಲಾಗಿದೆ. ಈ ಹಣವನ್ನು ನೇರವಾಗಿ ಹಾಲು ಉತ್ಪಾದಕರಿಗೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜನರನ್ನು ತಪ್ಪು ದಾರಿಗೆ ಏಳೆಯಬಾರದು, ನ್ಯಾಯಾಲಯದ ಆದೇಶದ ಮೇರೆಗೆ ಒತ್ತುವರಿ ಜಮೀನನ್ನು ತೆರವುಗೊಳಿಸಲಾಗುತ್ತಿದೆ. ಯಾವ ಆಧಾರದ ಮೇಲೆ ಜಮೀನು ಅಳತೆ ನಡೆಯುತ್ತಿದೆ ಎಂದು ಅವರೇ ಸರಿಯಾಗಿ ಹೇಳಲಿ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಬಾರದು ಎಂದರು.

ಕರಗದಹಳ್ಳಿ ಕಾಳಗಟ್ಟಮ್ಮ ದೇವಾಲಯವನ್ನು ಇನ್ನೆರಡು ವರ್ಷದಲ್ಲಿ ಸಮಗ್ರ ಅಭಿವೃದ್ಧಿ ಗೊಳಿಸಲಾಗುವುದು. ದೇವಾಲಯದ ಹೆಸರಿನಲ್ಲಿ 60 ಎಕರೆ ಜಮೀನಿದ್ದು, ದೇವರಿಗೆ ಹಾಗೂ ಯ್ಯರ‌್ಯಾರಿಗೆ ಎಷ್ಟೆಷ್ಟು ಸಲ್ಲಬೇಕು ಎಂದು ತೀರ್ಮಾನಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net