ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ವಸತಿ ಶಾಲೆಯಲ್ಲಿ ಚಿತ್ರ ಕಲೆ,ಪ್ರಬಂಧ ಸ್ಪರ್ಧೆ

IMG-20240913-WA0016
Published on

ಕಾಳಗಿ : ತಾಲೂಕಿನ  ಕೋಡ್ಲಿಯ ಸಮಾಜ ಕಲ್ಯಾಣ ಇಲಾಖೆಯ  ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೆಪ್ಟೆಂಬರ್ 15  ರಂದು ಆಚರಿಸಲಾಗುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯರಿಗೆ ಚಿತ್ರ ಕಲೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

" ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ " ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಸುಮಾರು 20 ಮತ್ತು ಚಿತ್ರ ಕಲೆಯಲ್ಲಿ   25 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ವಿಜೇತ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಕ್ರಮವಾಗಿ ಪ್ರಥಮ,ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು.

ಪ್ರಾಂಶುಪಾಲರಾದ ಡಾ.ರಾಜಶೇಖರ ಮಾಂಗ್,ಚಿತ್ರ ಕಲಾ ಶಿಕ್ಷಕಿ ಕವಿತಾ,ಶಿವಾನಂದ ಬೀಳಗಿ,ನಾಗಶೆಟ್ಟಿ, ಅಶೋಕ ,ಗೋಪಾಲದಾಸ,ಸಿದ್ದಯ್ಯ  ಹಿರೇಮಠ,  ಮಹಾನಂದ, ತುಕಾರಾಮ,ಬಸವರಾಜ,ಭಾಗ್ಯ ಜ್ಯೋತಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net