ಪ್ರಜಾತಂತ್ರ ವ್ಯವಸ್ಥೆ ಬಲಪಡಿಸಲು ಕಡ್ಡಾಯವಾಗಿ ವೋಟ್ ಹಾಕಿ

malagitti election
ಮಾಲಗಿತ್ತಿ ಗ್ರಾಪಂನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪಿಡಿಒ ಬಸವರಾಜ ಸಂಕನಾಳ, ಷಣ್ಮುಖಪ್ಪ ತೆರವಣ್ಣನವರ, ಹನುಮಂತ ಕಂದಕೂರು, ಆರೋಗ್ಯ ಇಲಾಖೆಯ ಪೃಥ್ವಿರಾಜ್ ಚವ್ಹಾಣ್, ಸೋಮಶೇಖರ ನಿಡಗುಂದಿ,ಗ್ರಾಮಸ್ಥರಾದ ಶಿವಾನಂದಪ್ಪ ಉಳ್ಳಾಗಡ್ಡಿ, ಸಿಂದೂರಪ್ಪ ಬಂಡಿ ಇದ್ದರು.
Published on

ಹನುಮಸಾಗರ: ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಹೇಳಿದರು.

ಆಸೆ, ಆಮಿಷಗಳಿಗೆ ಒಳಗಾಗಬೇಡಿ

ಮಾಲಗಿತ್ತಿಯ ಶಾಲಾ ಆವರಣದಲ್ಲಿ ತಾಪಂ ಸ್ವೀಪ್ ಸಮಿತಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾನ ಎನ್ನುವುದು ಪ್ರತಿಯೊಬ್ಬ ಭಾರತೀಯನ ಹಕ್ಕು. ಆಸೆ, ಆಮಿಷಗಳಿಗೆ ಒಳಗಾಗದೆ, ಅಭಿವೃದ್ಧಿ ಕಾರ್ಯ ಮಾಡುವ ವ್ಯಕ್ತಿಗೆ ಮತ ಹಾಕಿ ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ಪಿಡಿಒ ಬಸವರಾಜ ಸಂಕನಾಳ, ತಾಪಂ ಐಇಸಿ ಸಂಯೋಜಕ ಚಂದ್ರಶೇಖರಯ್ಯ ಹಿರೇಮಠ, ಬಿಎಫ್‌ಟಿ ಮಾರುತಿ ಸಾಳುಂಕಿ, ಗ್ರಾಪಂ ಸಿಬ್ಬಂದಿಗಳಾದ ಷಣ್ಮುಖಪ್ಪ ತೆರವಣ್ಣನವರ, ಹನುಮಂತ ಕಂದಕೂರು, ತಿಪ್ಪಣ್ಣ ಪಟ್ಟಲಚಿಂತಿ, ಸಂಜೀವಿನಿಯ ಸಂಯೋಜಕ ರಾಜು ಭಜಂತ್ರಿ, ಆರೋಗ್ಯ ಇಲಾಖೆಯ ಪೃಥ್ವಿರಾಜ್ ಚವ್ಹಾಣ್, ಸೋಮಶೇಖರ ನಿಡಗುಂದಿ,ಗ್ರಾಮಸ್ಥರಾದ ಶಿವಾನಂದಪ್ಪ ಉಳ್ಳಾಗಡ್ಡಿ, ಸಿಂದೂರಪ್ಪ ಬಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net