More

    BJPಯಲ್ಲಿ ಟಿಕೆಟ್ ಹಂಚಿಕೆ ವ್ಯಕ್ತಿಗತ ನಿರ್ಧಾರವಲ್ಲ: ಶೆಟ್ಟರ್ ಹೇಳಿಕೆ ವಿರುದ್ಧ ಗುಡುಗಿದ ಮಹೇಶ ಟೆಂಗಿನಕಾಯಿ

    ಹುಬ್ಬಳ್ಳಿ: ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯು ಒಗ್ಗಟ್ಟಿನ ನಿರ್ಧಾರವಾಗಿರುತ್ತದೆ. ವ್ಯಕ್ತಿಗತವಾಗಿ ಎಂದಿಗೂ ತಿರ್ಮಾನ ಆಗುವುದಿಲ್ಲ ಎಂದು ಹು- ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಹೇಳಿದರು.

    ಇಲ್ಲಿಯ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ನೀಡುವುದನ್ನು ಬಿಜೆಪಿ ಸಂಘಟನಾ ಪ್ರಧಾನ‌ ಕಾರ್ಯದರ್ಶಿ ಬಿ.ಎಲ್. ಸಂತೋಷ ಒಬ್ಬರೇ ನಿರ್ಣಯ ಮಾಡಿಲ್ಲ. ಬಿಜೆಪಿಯ ಸಂಸದೀಯ ಮಂಡಳಿ ನಿರ್ಣಯ ಮಾಡಿದೆ ಎಂದರು.

    ನನಗೆ ಜಗದೀಶ್ ಶೆಟ್ಟರ್ ಅವರು ಗುರುಗಳು. ಅವರು ನನ್ನನ್ನು ಬಿ.ಎಲ್.‌ಸಂತೋಷ ಅವರ ಮಾನಸ ಪುತ್ರ ಎಂದು ಯಾಕೆ ಹೇಳಿದರೂ ಎಂಬುದನ್ನು ಅವರನ್ನೇ ಕೇಳಿ. ಶೆಟ್ಟರ್ ಅವರಿಗೆ ಪಕ್ಷ ಎಲ್ಲ ಗೌರವ ಕೊಟ್ಟಿದೆ. ಕಳೆದ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದ ಟಿಕೆಟ್ ನನಗೆ ಹಂಚಿಕೆಯಾಗಿತ್ತು. ಕೊನೆಯಲ್ಲಿ ಬದಲಾವಣೆ ಮಾಡಿದರೂ ಪಕ್ಷದ ತೀರ್ಮಾ‌ನಕ್ಕೆ ಬದ್ಧವಾಗಿ ತಕ್ಷಣ ಹಿಂದೆ ಸರಿದ್ದಿದ್ದೇವೆ ಎಂದು ಹೇಳಿದರು.

    ಇದನ್ನೂ ಓದಿ:  ನನಗೆ ವಿಧಾನಸಭೆ ಟಿಕೆಟ್ ತಪ್ಪಲು ಬಿ. ಎಲ್. ಸಂತೋಷ್ ಅವರೇ ಕಾರಣ; ಕಣ್ಣೀರು ಹಾಕಿದ ಜಗದೀಶ್ ಶೆಟ್ಟರ್

    ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಮಂಗಳವಾರ ಹುಬ್ಬಳ್ಳಿ ಪಾಲಿಕೆ ಕಚೇರಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.ಪಾಲಿಕೆ ಉಪ ಮೇಯರ್ ಉಮಾ ಮುಕುಂದ, ಪಾಲಿಕೆ ಮಾಜಿ ಮೇಯರ್ ವೀರಣ್ಣ ಸವಡಿ, ಸದಸ್ಯ ಸಂತೋಷ ಚವ್ಹಾಣ, ದತ್ತ ಮೂರ್ತಿ ಕುಲಕರ್ಣಿ ಇದ್ದರು. ಏ. ೨೦ ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.

    ಜಗದೀಶ್ ಶೆಟ್ಟರ್, ಸವದಿ ಕಾಂಗ್ರೆಸ್‌ಗೆ ಬಂದ ಮೇಲೆ‌ 150 ಸ್ಥಾನ ಗೆಲ್ಲುವುದು ಖಚಿತವಾಗಿದೆ: ಡಿಕೆಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts