ಪ್ರಕೃತಿಗೆ ಪೂರಕವಾಗಿ ಬದುಕಿ

bkt-8-3
Published on

ಬಾಗಲಕೋಟೆ: ಪ್ರಕೃತಿಗೆ ಹೆಚ್ಚಿನ ಮಹತ್ವವನ್ನು ನೀಡಿ, ಅದಕ್ಕೆ ಪೂರಕವಾಗಿ ಬದುಕುವ ಮೂಲಕ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಹೆಚ್ಚಿನ ಪಾತ್ರ ನಿರ್ವಹಿಸಬೇಕಿದೆ ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ. ಹೇಳಿದರು.

ವಿವಿಯ ಉದ್ಯಾನಗಿರಿಯಲ್ಲಿರುವ ಉಪ ಪ್ರಾದೇಶಿಕ ವಿe್ಞÁನ ಕೇಂದ್ರದಲ್ಲಿ ಮಂಗಳವಾರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೋಸೈಟಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹವಾಮಾನ ಬದಲಾವಣೆ ಎಂಬ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವೈಜ್ಞಾನಿಕ ಆಲೋಚಣೆಗಳೊಂದಿಗೆ ಪರಿಸರ ಸಂರಕ್ಷಣೆ ಮಾಡಲು ಮುಂದಾಗಬೇಕು. ಪರಿಸರ ಉಳಿದರೇ ಮಾತ್ರ ಮನುಕುಲಕ್ಕೆ ಉಳಿಗಾಲವಿದೆ ಎಂದರು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಲತಾ ಎಂ.ಎಚ್ ಮಾತನಾಡಿ, ಹವಾಮಾನ ಬದಲಾವಣೆ, ಅದರ ಹಿಂದಿನ ವಿಜ್ಞಾನ ಪರಿಣಾಮಗಳು ಬಹಳಷ್ಟು ಇವೆ. ಜಾಗತಿಕ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ನಿಸರ್ಗ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವ ಸ್ಥಿತಿ ಈಗ ಉಳಿದಿಲ್ಲ. ಈಗಿನಿಂದ ಪ್ರಯತ್ನ ಮಾಡುತ್ತಿದ್ದಂತೆ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.

ಪ್ರಾಧ್ಯಾಪಕ ಡಾ.ವಸಂತ ಗಾಣಿಗೇರ ಮಾತನಾಡಿ, ಹವಾಮಾನ ಬದಲಾವಣೆಯಿಂದ ತೋಟಗಾರಿಕೆ ಬೆಳೆಗಳಲ್ಲಿ ಆಗುವ ಬದಲಾವಣೆಯ ಬಗ್ಗೆ ಹಾಗೂ ಇಎಂಪಿಆರ್‌ಐ ಸಂಸ್ಥೆಯ ಹಿರಿಯ ಸಮಾಲೋಚಕ ಡಾ.ಸರಿತಾ ಬೋಯಾ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಪರಿಹರಿಸಲು ರೂಪಿಸಿರುವ ಕ್ರೀಯಾ ಯೋಜನೆಯ ಬಗ್ಗೆ ತಿಳಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ಹೊರಾಂಗಣ ಮತ್ತು ಒಳಾಂಗಣ ವಿಜ್ಞಾನ ಪ್ರದರ್ಶಿಕೆಗಳ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಸಂತೋಷಗೌಡ ಪಾಟೀಲ್ ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿನ ಕಾರ್ಬನ್ ಕ್ರೆಡಿಟ್ ಸ್ಕೋರ್ ಕುರಿತು ವಿವರವಾದ ಮಾಹಿತಿ ನೀಡಿದರು. ಶೇಖರ ಮನೋಜಿ ಬೆಳೆಗಳು ಮತ್ತು ಜಾನುವಾರುಗಳನ್ನು ಉಳಿಸಿಕೊಳ್ಳಲು ಮತ್ತು ಸಮಗ್ರ ಕೃಷಿಯ ಮೂಲಕ ಈ ಅಸ್ಥಿರ ವಾತಾವರಣದಲ್ಲಿ ಉತ್ತಮ ಇಳುವರಿ ಪಡೆಯಲು ಕೃಷಿಯ ಉಪಯೋಗಿಸುವ ಕಾರ್ಯವಿಧಾನಗಳು ಮತ್ತು ಅಭ್ಯಾಸಗಳ ಬಗ್ಗೆ ವಿವರವಾಗಿ ತಿಳಿಸಿದರು.

ಈರಣ್ಣಾ ಬುಳ್ಳಾ, ಆಸೀಫ ಬಾಗವಾನ, ಗಂಗನಗೌಡ ಪಾಟೀಲ ಇತರರು ಇದ್ದರು. ರುಚಿತಾಶ್ರೀ ಎ.ಎಂ. ನಿರೂಪಿಸಿದರು. ಜಗದಂಬಾ ಬಿ ಆರ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net