ಪ್ರಕೃತಿ ವಿರುದ್ಧ ನಡೆದರೆ ಕಲಿಸುತ್ತದೆ ಪಾಠ

12 YLP 01
Published on

ಯಲ್ಲಾಪುರ: ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಆರೋಗ್ಯವೂ ಸರಿಯಾಗಿರುತ್ತದೆ. ಪ್ರಕೃತಿ ವಿರುದ್ಧ ನಾವು ನಡೆದರೆ ಅದು ನಮಗೆ ಪಾಠ ಕಲಿಸುತ್ತದೆ ಎಂದು ತಾಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ ಹೇಳಿದರು.

ತಾಲೂಕಿನ ಆನಗೋಡ ಗ್ರಾ.ಪಂ ಆವಾರದಲ್ಲಿ ಸ್ವಚ್ಚ ಗ್ರಾಮ ಸ್ವಚ್ಚ ಪರಿಸರ ಯೊಜನೆಯಡಿ ನಡೆಯುತ್ತಿರುವ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮದಲ್ಲಿ ವೃಕ್ಷಾರೋಪಣ ನೆರವೇರಿಸಿ ಅವರು ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷೆ ರಾಧಾ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಕೆ.ಎಸ್. ಭಟ್ಟ ಆನಗೋಡ ಸ್ವಚ್ಛ ಭಾರತ ಮಿಶನ್ ಮತ್ತು ಪರಿಸರ ಜಾಗೃತಿ ಕುರಿತು ಉಪನ್ಯಾಸ ನೀಡಿದರು. ತಾಪಂ ಸದಸ್ಯ ಲಕ್ಷ್ಮೀನಾರಾಯಣ ಗುಮ್ಮಾನಿ, ಗ್ರಾಪಂ ಸದಸ್ಯರಾದ ಕೆ.ಟಿ. ಹೆಗಡೆ, ನಾಗವೇಣಿ ಹೆಗಡೆ, ಪಾರ್ವತಿ ಸಿದ್ದಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಸಾರ್ವಜನಿಕರು ಉಪಸ್ಥಿತರಿದ್ದರು. ಉಪಾಧ್ಯಕ್ಷ ರಾಮಚಂದ್ರ ಚಿಕ್ಯಾನಮನೆ, ಪಿಡಿಒ ನಾರಾಯಣ ಗೌಡ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net