ಪ್ಯಾರಾ ಮಿಲಿಟರಿ ಪಡೆಯಿಂದ ಪಥ ಸಂಚಲನ

bkt-30-6
Published on

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ ಹಿನ್ನಲೆಯಲ್ಲಿ ಜಿಲ್ಲೆಗೆ ಆಗಮಿಸಿದ ಪ್ಯಾರಾ ಮಿಲಿಟರಿ ಪಡೆ ಮತ್ತು ಪೊಲೀಸ್ ಪಡೆಯಿಂದ ಚುನಾವಣಾ ಮುಂಜಾಗ್ರತಾ ಕ್ರಮವಾಗಿ ನಗರದ ನಾನಾ ಕಡೆಗಳಲ್ಲಿ ಮಂಗಳವಾರ ಪಥ ಸಂಚಲನ ನಡೆಸಲಾಯಿತು.

ಬಾಗಲಕೋಟೆ ಹಳೆ ನಗರದ ವಲ್ಲಭಭಾಯಿ ಚೌಕ್‌ದಿಂದ ಪಥ ಸಂಚಲನ ಹೊರಟು ಹಳೆಯ ಅಂಚೆ ಕಚೇರಿ, ಕೊತ್ಲೇಶ್ವರ ದೇವಸ್ಥಾನ, ಪಂಕಾ ಮಸೀದಿ, ಟೆಂಗಿನಮಠ ಸೇರಿದಂತೆ ನಾನಾ ಕಡೆಗಳಲ್ಲಿ ಸಂಚರಿಸಿತು. ಪಥ ಸಂಚಲನದಲ್ಲಿ ಕಮಾಂಡೋ ಹಾಗೂ ಪೊಲೀಸ್ ಪಡೆ ಸೇರಿ ೧೦೦ ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ನಡೆದ ಪಥ ಸಂಚಲನದಲ್ಲಿ ಸಿಪಿಐ ಗುರುನಾಥ ಚವ್ಹಾಣ, ಪಿಎಸ್‌ಐಗಳಾದ ವಿನೋದ ಹೊಸಮನಿ, ಕಿರಣ ಮೋರೆ, ಮೈಕೋಡಿ ಸೇರಿದಂತೆ ಇತರರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net