ಪೌರಕಾರ್ಮಿಕರ ದಿನಾಚರಣೆ ಜಾಥಾಗೆ ಶಾಸಕ ಚಾಲನೆ

POURAKARMIKA
Published on

ಹೊಳೆನರಸೀಪುರ: ಪುರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಜಾಥಾಗೆ ಶಾಸಕ ಎಚ್.ಡಿ.ರೇವಣ್ಣ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು.

ಪುರಸಭೆ ಕಚೇರಿ ಮುಂಭಾಗ ಸೇರಿದ ಪೌರಕಾರ್ಮಿಕರು ಮತ್ತು ಸಿಬ್ಬಂದಿ ಶಾಸಕರಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು. ಪುರಸಭೆ ಅಧ್ಯಕ್ಷ ಎಚ್.ಕೆ.ಪ್ರಸನ್ನ, ಮುಖ್ಯಾಧಿಕಾರಿ ಯು.ಎಂ.ಶಿವಶಂಕರ್, ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯರಾದ ಎ.ಜಗನ್ನಾಥ್, ನಿಂಗಯ್ಯ, ವಾಸಿಂ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ವೆಂಕಟೇಶ್, ಪುರಸಭೆ ಸಿಬ್ಬಂದಿ ಸಿ.ಡಿ.ನಾಗೇಂದ್ರ ಕುಮಾರ್, ಪಂಕಜಾ, ರಮೇಶ್, ಪರಿಸರ ಇಂಜಿನಿಯರ್ ರುಚಿ ದರ್ಶಿನಿ, ಪುರಸಭೆ ಮೇಸ್ತ್ರಿಗಳಾದ ನಾಗಮ್ಮ, ಚೆಲುವ, ಕಿರಣ್, ಮಾದಯ್ಯ ಇತರರಿದ್ದರು.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಪೌರಕಾರ್ಮಿಕರು ಸಂಭ್ರಮದಿಂದ ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net