ಪೋರರೇ ಚೋರರು

images.png
Published on

ಹೊನ್ನಾವರ:  ಅಂಗಡಿಗಳಿಂದ ಮೊಬೈಲ್  ಕದಿಯುತ್ತಿದ್ದ ಕುಮಟಾ ಮೂಲದ  ಇಬ್ಬರು ಅಪ್ರಾಪ್ತ ಬಾಲಕರನ್ನು ಹೊನ್ನಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ನಗರದ ಮುಖ್ಯಪ್ರಾಣ ಮೊಬೈಲ್ ಅಂಗಡಿಗೆ ಬಂದಿದ್ದ ಇಬ್ಬರು ಬಾಲಕರು ಮೊಬೈಲ್ ಕವರ್ ಕೊಳ್ಳುವ ನೆಪದಲ್ಲಿ ಮಾಲೀಕನ ಲಕ್ಷ್ಯವನ್ನು ಬೇರೆಡೆ ಹರಿಯುವಂತೆ ಮಾಡಿ ಸುಮಾರು 19 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಎಗರಿಸಿದ್ದರು. ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಇದು ಸೆರೆಯಾಗಿತ್ತು. ಇಬ್ಬರ ಬೆನ್ನತ್ತಿದ ಹೊನ್ನಾವರ ಠಾಣೆ ಪೊಲೀಸರು ಎಸ್ ಎಸ್ ಎಲ್ ಸಿ ಓದುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇದೇ ಇಬ್ಬರು ಅಂಕೋಲಾದಲ್ಲೂ ಕಳ್ಳತನ ನಡೆಸಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net