ಪೋದಾರ್ ಶಾಲೆಯಲ್ಲಿ ದೀಪಾವಳಿ ಮೇಳ ಇಂದು

Published on

ಅರಸೀಕೆರೆ ಗ್ರಾಮಾಂತರ: ನಗರದ ಹೊರವಲಯದ ಹೆಂಜಗೊಂಡನಹಳ್ಳಿ ಬಡಾವಣೆಯಲ್ಲಿರುವ ಪೋದಾರ್ ಪ್ರೆಪ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಅ.26ರಂದು ದೀಪಾವಳಿ ಮೇಳ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಪಾಲಕರಿಗಾಗಿ ಕೆಲವು ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ ಎಂದು ಶಾಲಾ ಮುಖ್ಯಶಿಕ್ಷಕಿ ದೀಪಿಕಾ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯವಾಗಿ ರಂಗೋಲಿ ಬಿಡಿಸುವುದು, ದೀಪಗಳಿಗೆ ವಿಶೇಷವಾಗಿ ಅಲಂಕಾರ ಮಾಡುವುದು, ವಿದ್ಯುತ್ ದೀಪಗಳಿಗೆ ಪೇಪರ್‌ನಿಂದ ಲ್ಯಾಂಪ್ ತಯಾರಿಸುವ ಚಟುವಟಿಕೆಗಳಿರುತ್ತವೆ. ಇದರಲ್ಲಿ ಮಕ್ಕಳ ಪಾಲಕರು ಮಾತ್ರವಲ್ಲದೆ ಸಾರ್ವಜನಿಕರು ಭಾಗವವಹಿಸಬಹುದು. ದೀಪಾವಳಿಯ ಈ ವಿಶೇಷ ಕಾರ್ಯಕ್ರಮದಲ್ಲಿ ಹೆಚ್ಚಿನ ಸಾರ್ವಜನಿಕರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net