ಪೋಕ್ಸೋ ಕಾಯ್ದೆ ಅಡಿಯಲ್ಲಿ ೧೭ ಕಠಿಣ ಜೈಲು ಶಿಕ್ಷೆ

images
Published on

ಬಾಗಲಕೋಟೆ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಅಪರಾಧಿಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ೧೭ ವರ್ಷ ಜೈಲು ಶಿಕ್ಷೆ, ೧೦ ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ನಿಂಗಪ್ಪ ಕರಿಯಪ್ಪ ಮಾದರ(೪೫) ಶಿಕ್ಷೆಗೆ ಗುರಿಯಾದ ಅಪರಾಧಿ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ೨೦೧೯ ರಲ್ಲಿ ಬಾಗಲಕೋಟೆ ಶಹರ ಪೊಲೀಸ್ ಠಾಣೆಯಲ್ಲಿ ನಿಂಗಪ್ಪ ಕರಿಯಪ್ಪ ಮಾದರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ತನಿಖಾ ವರದಿ ಸಲ್ಲಿಸಿದ ಬಳಿಕ ನ್ಯಾಯಾಲಯವು ಆರೋಪ, ಪ್ರತ್ಯಾರೋಪ ಆಲಿಸಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ೧೦ ವರ್ಷ ಕಠಿಣ ಜೈಲು ಶಿಕ್ಷೆ, ೧೦ ಸಾವಿರ ದಂಡ ಹಾಗೂ ಐಪಿಎಸ್ ಸೆಕ್ಷನ್ ೩೫೬ ಸೇರಿದಂತೆ ವಿವಿಧ ಕಲಂ ಅಡಿಯಲ್ಲಿ ೭ ವರ್ಷ ಜೈಲು ಸೇರಿದಂತೆ ಒಟ್ಟು ೧೭ ವರ್ಷ ಜೈಲು ಶಿಕ್ಷೆ, ೧೦ ಸಾವಿರ ದಂಡ ನ್ಯಾಯಾಲಯವು ವಿಧಿಸಿದೆ. ಅಲ್ಲದೆ ದಂಡ ಕಟ್ಟದಿದ್ದರೇ ೧ ವರ್ಷ ಸಾಧಾರಣಾ ಜೈಲು ಶಿಕ್ಷೆ ವಿಽಸಿದೆ.
ತನಿಖಾಧಿಕಾರಿ ಬಾಗಲಕೋಟೆ ಸಿಪಿಐ ಎಸ್.ಎನ್.ಗಾಬಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ, ಮಲ್ಲಿಕಾರ್ಜುನ ಹಂಡಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net