

ಬಾಗಲಕೋಟೆ: ನಾಗಲಮಂಗಲದಲ್ಲಿ ನಡೆದಿರುವ ಗದ್ದಲಕ್ಕೆ ಸಂಬಂಽಸಿದಂತೆ ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಪಗಳ ಹೇಳಿಕೆ ಬಗ್ಗೆ ಭಾನುವಾರ ಬಾಗಲಕೋಟೆಯಲ್ಲಿ ಮತನಾಡಿರುವ ಸಚಿವ ಆರ್.ಬಿ.ತಿಮ್ಮಾಪುರ, ಅಲ್ಲಿ ಗದ್ದಲ ನಡೆದಿರುವುದು ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಗೊತ್ತಿರುತ್ತದೆ. ಅವರು ಅಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ನಾಗಮಂಗದಲ್ಲಿ ನಡೆದಿರುವ ಘಟನೆ ಬಗ್ಗೆ ಇಲ್ಲಿ ಬಾದಾಮಿಯವರನು, ದೆಹಲಿಯವರು ಕುಳಿತುಕೊಂಡು ಅದು ಹಂಗಾಯಿತು, ಇದು ಹಿಂಗಾಯಿತು ಎಂದು ಹೇಳುವುದು ಸರಿಯಲ್ಲ. ಇನ್ನು ಘಟನೆಯ ವಿವರ ಗೊತ್ತಾಗಿಲ್ಲ, ಪೊಲೀಸರು ಚಾರ್ಜ್ಶೀಟ್ ಹಾಕಿಲ್ಲ. ತತಕ್ಷಣ ಇವರು ಈ ಧರ್ಮದ ಬೆನ್ನು ಹತ್ತಿದರು, ಅವರು ಆ ಧರ್ಮದ ಬೆನ್ನು ಹತ್ತಿದರು ಎನ್ನುವುದು. ಘಟನೆಯನ್ನು ನಾವೆಲ್ಲರೂ ಸೇರಿ ಖಂಡಿಸಬೇಕು. ಎಲ್ಲರೂ ಜೊತೆಗೂಡಿ ಸಾಮರಸ್ಯದ ಬದುಕಿನ ಕಡೆಗೆ ತೆಗೆದುಕೊಂಡು ಹೋಗಬೇಕು ವಿನಃ ಬೇರೆ ಬೇರೆ ಮಾತನಾಡುವಂತದ್ದು ಬಹಳ ವಿಷಾಧಕರ ಸಂಗತಿ ಎಂದರು.
ಇನ್ನು ಅಲ್ಲಿನ ಘಟನೆಗೆ ಪೊಲೀಸ್ ವೈಪಲ್ಯ ಎನ್ನುವ ಆರೋಪಕ್ಕೆ, ಇಲ್ಲಿ ಪೊಲೀಸರ ವೈಪಲ್ಯ ಇರಲ್ಲ, ಯಾವುದೋ ಕಿಡಗೇಡಿ ಒಂದು ಕೆಲಸ ಮಾಡಿರುತ್ತಾನೆ. ಅಂಥದ್ದರಲ್ಲಿ ಇಂಥ ಘಟನೆ ನಡೆಯುತ್ತದೆ. ನಮ್ಮ ಪೊಲೀಸರು ಭಾರಿ ಗಟ್ಟಿಯಾಗಿ ನಿಬಾಯಿಸುವ ಶಕ್ತಿ ಹೊಂದಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲೆ ಸಿಎಂ ಸ್ಥಾನದ ಬಗ್ಗೆ ಕೆಲ ಸಚಿವರ ಚರ್ಚೆ ನಡೆಸಿರುವ ಬಗ್ಗೆ ಉತ್ತರಿಸಿದ ಸಚಿವ ತಿಮ್ಮಾಪುರ, ನಾವುಗಳು ಸಿಎಂ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಗಳು ಇದ್ದಾರೆ. ಹೀಗಾಗಿ ಈ ಬಗ್ಗೆ ಮಾತನಾಡುವುದು ಅನವಶ್ಯಕವಾಗಿದೆ. ಈ ಬಗ್ಗೆ ಚರ್ಚೆ ಮಾಡದಂತೆ ಹೈಕಮಾಂಡ್ ಸೂಚನೆಯೇನೂ ಇಲ್ಲ. ಆದರೆ, ಈಗ ಚರ್ಚೆಯೇ ಇಲ್ಲವಲ್ಲ. ಅಲ್ಲೊಂದು ಇಲ್ಲೊಂದು ಯಾರೂ ತಮ್ಮ ಅನಿಸಿಕೆ ಹೇಳಿರುತ್ತಾರೆ. ಅದು ಚರ್ಚೆಯೂ ಅಲ್ಲ, ದೊಡ್ಡ ವಿಷಯವೂ ಅಲ್ಲ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರೇ ನಮ್ಮ ಮುಖ್ಯಮಂತ್ರಿ ಎಂದು ತಿಳಿಸಿದರು.
ಇನ್ನು ಕೆಲ ಸಚಿವರಿಗೆ ಸಿಎಂ ಬ್ರೆಕ್ ಪಾಸ್ಟ್ಗೆ ಕರೆದಿರುವ ಬಗ್ಗೆ, ಬ್ರೆಸ್‌ಪಾಸ್ಟ್ ಯಾರು ಕರೆದಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ನಾನಂತೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.