ಪೊಲೀಸ್ ಸಿಬ್ಬಂದಿಗೆ ತಂಪುಪಾನೀಯ ವಿತರಣೆ

22bkl1
Published on

ಭಟ್ಕಳ: ಸದಾ ಜನನಿಬಿಡತೆಯಿಂದ ಕೂಡಿರುತ್ತಿದ್ದ ಇಲ್ಲಿನ ಹೂವಿನ ಮಾರ್ಕೆಟ್, ಹಳೇ ಬಸ್ ನಿಲ್ದಾಣ, ಭಟ್ಕಳ ಸರ್ಕಲ್, ರಂಗಿನಕಟ್ಟೆ ಸೇರಿ ಎಲ್ಲೆಲ್ಲೂ ಜನರಿಲ್ಲದೆ ಬಣಗುಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಿಸಿಲಿನ ಜಳದಲ್ಲೂ ತಮ್ಮ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಭಟ್ಕಳದ ಮುಸ್ಲಿಂ ಯುವಕರು ತಂಪು ಪಾನೀಯ ನೀಡಿ ಮಾನವೀಯತೆ ಮರೆದಿದ್ದಾರೆ.

ತಾಲೂಕಿನ ಗಡಿಭಾಗದಲ್ಲಿ ಕಟ್ಟೆಚ್ಚರ: ಭಟ್ಕಳ ತಾಲೂಕಿನ ಗಡಿಭಾಗವಾದ ಶಿರೂರು ಟೋಲ್​ಗೇಟ್ ಬಳಿ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ. ಆರೋಗ್ಯಾಧಿಕಾರಿಗಳ ತಂಡ ಟೋಲ್ ಗೇಟ್ ಬೀಡುಬಿಟ್ಟಿದ್ದು ಹೊರರಾಜ್ಯಗಳಿಂದ ಬರುವ ಖಾಸಗಿ ಬಸ್, ಸರ್ಕಾರಿ ಬಸ್ ಸೇರಿ ಅನುಮಾನ ಬಂದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.

ತಪಾಸಣೆ ವೇಳೆ ಮೂರು ವ್ಯಕ್ತಿಗಳಲ್ಲಿ ಕರೊನಾ ಶಂಕೆ ವ್ಯಕ್ತವಾಗಿದ್ದು ಅವರನ್ನು ಹೆಚ್ಚಿನ ಪರೀಕ್ಷೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ದುಬೈನಿಂದ ಮರಳಿದ ವ್ಯಕ್ತಿ ಯೊರ್ವನ ಕೈಯಲ್ಲಿ ಮುದ್ರೆ ಇರುವುದು ಕಂಡು ಬಂದಿದೆ. ಆ ವ್ಯಕ್ತಿಯನ್ನು ಪುನಃ ತಪಾಸಣೆ ನಡೆಸಿ ವಿಳಾಸ ಪತ್ತೆ ಹಚ್ಚಿ ಮನೆಯಲ್ಲಿ ಐಸೊಲೇಶನ್ ಅಲ್ಲಿ ಇರುವಂತೆ ವೈದ್ಯಾಧಿಕಾಗಳು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net