ಪೊಲೀಸ್ ಮ್ಯಾರಥಾನ್‌ಗೆ ಹೆಜ್ಜೆ ಹಾಕಿದ ಜನ

01
Published on

ಬೆಳಗಾವಿ: ನಮ್ಮ ಪೊಲೀಸ್, ನಮ್ಮ ಹೆಮ್ಮೆ ಘೋಷವಾಕ್ಯದೊಂದಿಗೆ ನಗರದಲ್ಲಿ ಭಾನುವಾರ ಮ್ಯಾರಥಾನ್ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಮತ್ತು ಶಾಂತಿ ಕುರಿತು ಜಾಗೃತಿ ಮೂಡಿಸಲಾಯಿತು.

ರಜೆ ಮಧ್ಯೆಯೂ ಜನರು ನಗರದ ಸಿಪಿಇಡಿ ಮೈದಾನದಿಂದ ಆರಂಭಗೊಂಡ ಮ್ಯಾರಥಾನ್‌ನಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು. ರಾಜ್ಯ ಮತ್ತು ಹೊರ ರಾಜ್ಯಗಳ ಜನರಷ್ಟೇ ಅಲ್ಲದೆ, ವಿದೇಶಿಗರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಾರ್ವಜನಿಕರಿಗೆ ಏರ್ಪಡಿಸಿದ್ದ ಪುರುಷರ ವಿಭಾಗದ 10 ಕಿ.ಮೀ. ಮ್ಯಾರಥಾನ್‌ನಲ್ಲಿ ಅನಿಕೇತ ಶಿಂಗಾರೆ ಪ್ರಥಮ, ಸುನೀಲ ಡಿ. ದ್ವಿತೀಯ, ಚೇತನ ಕಶ್ಯಪ್ ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗದ 10 ಕಿ.ಮೀ. ಮ್ಯಾರಥಾನ್‌ನಲ್ಲಿ ವೈಷ್ಣವಿ ರಾವಳ, ಅಕ್ಷತಾ ಮಜುಕರ, ನಕ್ಷಾ ಮಾಂಗಕರ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ಪುರುಷರ ವಿಭಾಗದ 5 ಕಿ.ಮೀ. ಮ್ಯಾರಥಾನ್‌ನಲ್ಲಿ ತೇಜಸ್ ನೇಮಡೆ ಪ್ರಥಮ, ಭೂಷಣ ಕದಮ ದ್ವಿತೀಯ, ಗಣೇಶ ಹಿರೋಜಿ ತೃತೀಯ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದ 5 ಕಿ.ಮೀ. ಮ್ಯಾರಥಾನ್‌ನಲ್ಲಿ ಅಪೂರ್ವ ನಾಯ್ಕ ಪ್ರಥಮ, ಸೃಷ್ಟಿ ಜುವೇಕರ ದ್ವಿತೀಯ, ಅನಘಾ ಶಾನಭಾಗ ತೃತೀಯ ಬಹುಮಾನ ಪಡೆದರು.

ಪೊಲೀಸರಿಗೆ ಆಯೋಜಿಸಿದ್ದ 10 ಕಿ.ಮೀ. ಮ್ಯಾರಥಾನ್‌ನಲ್ಲಿ ಮಹಾಂತೇಶ ದಮ್ಮನ್ನವರ ಪ್ರಥಮ, ದರಿಯಪ್ಪ ಬದನೂರ ದ್ವಿತೀಯ, ಸಂಗಪ್ಪ ಗೊರವರ ತೃತೀಯ, 5 ಕಿ.ಮೀ. ಮ್ಯಾರಥಾನ್‌ನಲ್ಲಿ ಶಿವಾನಂದ ರಾಠೋಡ, ಲಕ್ಷ್ಮಣ ಉಳ್ಳೇಗಡ್ಡಿ, ರಮೇಶ ಮಬನೂರ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ವಿಜೇತರಿಗೆ ಬಹುಮಾನ ವಿತರಿಸಿ, ಗೌರವಿಸಲಾಯಿತು.

ಬೆಳಗಾವಿ ಉತ್ತರ ವಲಯದ ಐಜಿಪಿ ಚೇತನ್ ಸಿಂಗ್ ರಾಠೋರ ಮಾತನಾಡಿ, ಪೊಲೀಸರು ಒದಗಿಸುತ್ತಿರುವ ಜನಸ್ನೇಹಿ ಸೇವೆ, ಸಮಾಜದಲ್ಲಿ ಶಾಂತಿ ಕಾಪಾಡುವುದು ಮತ್ತು ಆರೋಗ್ಯದ ಕುರಿತು ಸಂದೇಶ ಸಾರಲು ಈ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದರು.

ನಗರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ಮ್ಯಾರಥಾನ್‌ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿರುವುದು ಸಂತಸ ತಂದಿದೆ. ಕರ್ನಾಟಕವನ್ನು ಮಾದಕವಸ್ತು ಮುಕ್ತಗೊಳಿಸಲು ಪೊಲೀಸ್ ಇಲಾಖೆ ಪಣ ತೊಟ್ಟಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಡಿಸಿಪಿ ರೋಹನ್ ಜಗದೀಶ, ಸಿದ್ಧನಗೌಡ ಪಾಟೀಲ, ನಿರಂಜನ ರಾಜೇಅರಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net