

ಹಣಕಾಸಿನ ವ್ಯವಹಾರ | ಅಫಜಲಪುರ ರಸ್ತೆಯ ಚೆಕ್‌ಪೋಸ್ಟ್ ಬಳಿ ಅಡ್ಡಗಟ್ಟಿದಾಗ ಗಲಾಟೆ | ಪಿಸ್ತೂಲ್ ಗುಂಡುಮ ಎರಡು ಕಾರ್ ವಶಕ್ಕೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹಣಕಾಸಿನ ವ್ಯವಹಾರದ ವೈಷಮ್ಯದ ಹಿನ್ನೆಲೆಯಲ್ಲಿ ಸಿನಿಮೀಯ ರೀತಿಯಲ್ಲಿ ಪೊಲೀಸರು ಎಂದು ಸುಳ್ಳು ಹೇಳಿ ಗನ್ ತೋರಿಸಿ ಮಹಿಳೆಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಲು ಯತ್ನಿಸಿದಾಗ ಗಲಾಟೆ ನಡೆದು ಜನರು ಜಮಾಗೊಂಡು ಬಿಗುವಿನ ವಾತಾವರಣ ನಿರ್ಮಾಣಗೊಂಡ ಘಟನೆ ಸೋಮವಾರ ಸಂಜೆ ನಗರದ ಅಫಜಲಪುರ ರಸ್ತೆಯಲ್ಲಿರುವ ಚೆಕ್‌ಪೋಸ್ಟ್ನಲ್ಲಿ (ಹೈಕೋರ್ಟ್ ಹತ್ತಿರ) ನಡೆದಿದೆ.
ಘಟನೆಗೆ ಸಂಬAಧಿಸಿದAತೆ ಉಪ ಪೊಲೀಸ್ ಆಯುಕ್ತ ಅಡ್ಡೂರು ಶ್ರೀನಿವಾಸುಲು ಮಾರ್ಗದರ್ಶನದಲ್ಲಿ ಅಶೋಕ ನಗರ ಠಾಣೆಯ ಇನ್‌ಸ್ಪೆಕ್ಟರ್ ಪಂಡಿತ ಸಗರ ಹಾಗೂ ಪೊಲೀಸ್ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿ, ಲೈಸನ್ಸ್ ಹೊಂದಿದ ಪಿಸ್ತೂಲ್ ಹಾಗೂ ೧೮ ಜೀವಂತ ಗುಂಡುಗಳನ್ನು, ಎರಡು ಕಾರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಹಣ ಕೊಡಬೇಕಾಗಿರುವ ಮಂಗಲಾ, ಪೊಲೀಸ್ ಎಂದು ಬಿಂಬಿಸಿಕೊAಡ ದಯಾನಂದ ಹೂಗಾರ ಹಿರೋಳ್ಳಿ, ರಾಜಕುಮಾರ ಪಾಟೀಲï ಹಿರೇಜೇವರ್ಗಿ, ಕಾರಭೋಸಗಾದ ನಬಿಸಾಬ್ ದಸ್ತಿಗಿರ ಶೇಖ ಎಂಬುವರು ಪೊಲೀಸ್ ವಶದಲ್ಲಿದ್ದಾರೆ. ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಘಟನೆ ವಿವರ
ಕಲಬುರಗಿ ಹೊರವಲಯದ ಶ್ರೀನಿವಾಸ ಸರಡಗಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಗೌಡಗಾಂವ ಮೂಲದ ಮಂಗಳ ಮಹೇಶ್ ಬಿರಾದಾರ ಎಂಬುವರಿಗೆ ಶೆಟ್ಟಿ ಕಾಂಪ್ಲೆಕ್ಸ್ ಬಳಿಯ ನಿವಾಸಿ ಸಾವಿತ್ರಿ ರಮೇಶ ಕಲಶೆಟ್ಟಿ ಎಂಬುವರು ೨೦ ಲಕ್ಷ ರೂ. ಹಣವನ್ನು ಕೊಟ್ಟಿದ್ದರು. ಹಲವು ಸಲ ಕೇಳಿದರು, ಕೊಟ್ಟಿರಲಿಲ್ಲ. ಹೀಗಾಗಿ ಹಣ ಕೇಳಲು ಸೋಮವಾರ ಸಾವಿತ್ರಿ ಹಾಗೂ ಅವರ ಪುತ್ರ ಮಾಣಿಕಪ್ಪ ಸೇರಿಕೊಂಡು ಶ್ರೀನಿವಾಸ ಸರಡಗಿಯ ಶಾಲೆಗೆ ಹೋಗಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆಯಲ್ಲಿ ಹಣ ಕೊಡಬೇಕಾಗಿರುವ ಮಂಗಲಾ ಕೆಲವರಿಗೆ ಕರೆ ಮಾಡಿ ಕರೆಯಿಸಿಕೊಂಡಿದ್ದಾರೆ. ಗಲಾಟೆ ನಡೆಯುವ ಕಾಲಕ್ಕೆ ಅಲ್ಲಿಗೆ ದಯಾನಂದ ಹೂಗಾರ, ರಾಜಕುಮಾರ ಪಾಟೀಲ್, ನಬಿಸಾಬ್, ರಮೇಶ ಎಂಬುವರು ಆಗಮಿಸಿದರು. ಆಗ ದಯಾನಂದ ಬಳಿ ಇದ್ದ ಪರವಾನಿಗೆ ಹೊಂದಿದ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ಅಲ್ಲದೆ ಮಂಗಲಾ ವಿರುದ್ದ ಕೇಸ್ ಕುರಿತು ವಾರೆಂಟ್ ಇದೆ ಕರೆದುಕೊಂಡು ಹೋಗಬೇಕು ಎಂದು ಹೇಳಿ ಮಂಗಲಾ ಅವರ ಕಾರಿನಲ್ಲಿ ಸಾವಿತ್ರಿ ಅವರನ್ನು ಕುಳ್ಳಿರಿಸಿಕೊಂಡು ಹೊರಟಿದ್ದಾರೆ. ಪೊಲೀಸ್ ಕಮಿಷನರ್ ಕಚೇರಿಗೆ ಹೋಗಬೇಕು ಎಂದು ಹೇಳಿ ಅಫಜಲಪುರ ರಸ್ತೆಯಲ್ಲಿ ಹೊರಟಾಗ ಹಿಂದೆ ಇನ್ನೊಂದು ಕಾರಿನಲ್ಲಿ ಹೊರಟಿದ್ದ ಸಾವಿತ್ರಿ ಪುತ್ರ ಮಾಣಿಕಪ್ಪ ಸಂಶಯಗೊAಡು ಸಹೋದರ ಸಂಬAಧಿಗೆ ಕರೆ ಮಾಡಿದ್ದಾರೆ. ಹೀರಾಪುರ ಸರ್ಕಲ್ ದಾಟಿ ಬಂಕ್ ಬರುತ್ತಲೇ ಆಗ ಕಾರಿಗೆ ಅಡ್ಡ ಹಾಕಲು ಯತ್ನಿಸಿದ್ದಾನೆ, ಮುಂದೆ ಬಂದಾಗ ಪಿಸ್ತೂಲ್ ತೋರಿಸಿ ಬೆದರಿಸಲು ಯತ್ನಿಸಿದ್ದಾರೆ.
ಆಗ ಮಾಣಿಕಪ್ಪ ತಾಯಿಯನ್ನು ಕಿಡ್ನಾಪ್ ಮಾಡುತ್ತಿದ್ದಾರೆ ಎಂದು ಕಿರುಚತ್ತಲೇ ಬೆನ್ನಟ್ಟಿದ್ದಾನೆ. ದುಷ್ಕರ್ಮಿಗಳು ಕಾರ್ ವೇಗವಾಗಿ ತೆಗೆದುಕೊಂಡು ಹೋಗಿದ್ದಾರೆ. ಚೆಕ್‌ಪೋಸ್ಟ್ ಬಳಿ ಬಂದು ಕಾರಿಗೆ ಅಡ್ಡ ಹಾಕಿ ತಾಯಿಯನ್ನು ಬಿಡಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟೊತ್ತಿಗೆ ಜನರು ಜಮಾಗೊಂಡರು. ಅಲ್ಲದೆ ಆತನ ಸಹೋದರ ಸಂಬAಧಿಯು ಬಂದ. ಇದರಿಂದಾಗಿ ಗಲಾಟೆ ನಡೆಯಿತು. ಎರಡು ಕಡೆಯುವರು ಮಾರಾಮಾರಿ ಶುರುವಾಯಿತು. ಬಿಗುವಿನ ವಾತಾವರಣ ಸಹ ನಿರ್ಮಾಣಗೊಂಡಿತ್ತು.
ಈ ವೇಳೆಯಲ್ಲಿ ಚೆಕ್‌ಪೋಸ್ಟ್ನಲ್ಲಿ ಕರ್ತವ್ಯ ನಿರತ ಪೂಲೀಸ್ ಸಿಬ್ಬಂದಿ ಬಸವರಾಜ ಮೇಟಿ ಮತ್ತು ಬಾಬಾ ಪಟೇಲ್ ಸ್ಥಳಕ್ಕೆ ಧಾವಿಸಿ ಹೋಗಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ನಂತರ ಅಶೋಜ ನಗರ ಇನ್‌ಸ್ಪೆಕ್ಟರ್ ಪಂಡಿತ ಸಗರ ಅವರಿಗೆ ಮಾಹಿತಿ ನೀಡಿದಾಗ ಬೆನ್ನಲ್ಲಿಯೇ ಅವರು ಆಗಮಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಎಲ್ಲರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ ಬಳಿಯಿದ್ದ ಪಿಸ್ತೂಲ್ ಸಹ ವಶಪಡಿಸಿಕೊಂಡಿದ್ದಾರೆ. ಡಿಸಿಪಿ ಅಡ್ಡೂರು ಶ್ರೀನಿವಾಸಲು ಸಹ ಭೇಟಿ ನೀಡಿದರು.
ಅಶೋಕ ನಗರ ಠಾಣೆಯ ಇನ್‌ಸ್ಪೆಕ್ಟರ್ ಪಂಡಿತ ಸಗರ ಹಾಗೂ ಸಿಬ್ಬಂದಿ ಸಕಾಲಿಕ ಕ್ರಮದಿಂದಾಗಿ ಸಂಭವಿಸದಬಹುದಾಗಿದ್ದ ಅವಘಡ ತಪ್ಪಿದಂತಾಗಿದೆ. ವಶಕ್ಕೆ ತೆಗೆದುಕೊಂಡವರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಘಟನೆ ಮೊದಲು ನಡೆದಿದ್ದು ಶ್ರೀನಿವಾಸ ಸರಡಗಿಯಲ್ಲಿ ಹೀಗಾಗಿ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ Àದಾಖಲಾಗಿದೆ.