ಪೇಟೆ ಬೀದಿ ವಿಸ್ತರಣೆಗೆ ಕ್ರಮ

30M.D.R.1
Published on

ಮದ್ದೂರು: ಪಟ್ಟಣದ ಪೇಟೆ ಬೀದಿ ವಿಸ್ತರಣೆ ಕಾಮಗಾರಿಗೂ ಮುನ್ನ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಮರಕಾಡನದೊಡ್ಡಿ, ಗೊರವನಹಳ್ಳಿ, ಅಜ್ಜಹಳ್ಳಿ, ಕಳ್ಳಿ ಮೆಳ್ಳಿ ದೊಡ್ಡಿ, ಉಪ್ಪಾರದೊಡ್ಡಿಗಳಲ್ಲಿ ಮಂಗಳವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದ ಪೇಟೆ ಬೀದಿಯು ಪ್ರಮುಖ ರಸ್ತೆಯಾಗಿದ್ದು ಈ ರಸ್ತೆಯಲ್ಲಿ ಹೆಚ್ಚಾಗಿ ಗುಂಡಿಗಳು ಉಂಟಾಗಿರುವುದರಿಂದ ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

175 ಕೋಟಿ ರೂ.ವೆಚ್ಚದ ಪೇಟೆ ಬೀದಿ ವಿಸ್ತರಣೆ ಕಾಮಗಾರಿ ಪ್ರಾರಂಭವಾಗಲು ಇನ್ನೂ 4 ತಿಂಗಳು ಬೇಕಿದೆ. ಅದಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳು ನಡೆಯುತ್ತಿದ್ದು ಇಷ್ಟರಲ್ಲೇ ಸರ್ವ ಕಾರ್ಯ ನಡೆಯುತ್ತದೆ. ಅಲ್ಲಿಯವರೆಗೆ ವಾಹನ ಸವಾರರಿಗೆ ತೊಂದರೆಯಾಗದಿರಲೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ 5 ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದರು.

ಮುಖಂಡರಾದ ಗೊರವನಹಳ್ಳಿ ರಾಘವ್, ಹೊಂಬಯ್ಯ, ಮಧು, ಚಂದ್ರಶೇಖರ್, ಕದಲೂರು ಮಹೇಶ್, ಆದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net