

ಬಾಗಲಕೋಟೆ: ಸಂತಾನ ಹರಣ ಚಿಕಿತ್ಸೆ ಕಾರ್ಯಕ್ರಮ ಸರ್ಕಾರ ರೂಪಿಸುತ್ತದೆ. ಜಿಲ್ಲೆಯಲ್ಲಿ ಮಹಿಳೆಯರಿಗೆ ೫೬೪೦ ಗುರಿ, ಪುರುಷರಿಗೆ ಕೇವಲ ೫೬ ಗುರಿ ನೀಡಿರುವುದು ನೋಡಿದರೇ ಸರ್ಕಾರವೇ ಮುಂದೆ ನಿಂತು ಸಮಾಜದಲ್ಲಿ ತಾರತಮ್ಯೆ ಮಾಡುತ್ತಿದೆ, ಪುರುಷ ಪ್ರದಾನ ಕುಟುಂಬ ನೀತಿ ಮುಂದುವರೆಯುತ್ತಿದೆ. ಇದು ಜೋಕ ಅಲ್ಲ...!!!
ಹೀಗೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಕೆಡಿಪಿ ಸಭೆಯಲ್ಲಿ ವಿ.ಪ ಸದಸ್ಯೆ ಉಮಾಶ್ರೀ ವಿಷಯ ಪ್ರಸ್ತಾಪಿಸಿ ಗಮನ ಸೆಳೆದರು, ನಾವೆಲ್ಲ ಗಂಭೀರವಾಗಿ ಗಂಭೀರವಾಗಿ ಪರಿಗಣಿಸಬೇಕು ಎಂದರು. ಕೆಲವು ಶಾಸಕರು ಧ್ವನಿಗೂಡಿಸಿದರೇ, ಹಲವು ಶಾಸಕರು ಮೌನಕ್ಕೆ ಶರಣರಾದರು. ಕೊನೆಗೆ ಸಚಿವ ಆರ್.ಬಿ.ತಿಮ್ಮಾಪುರ, ಈ ಬಗ್ಗೆ ನಿಜವಾಗಿ ಗಮನ ಹರಿಸಬೇಕಿದೆ. ಹೊಸ ಯುಗದಲ್ಲಿ ನಾವು ಇದ್ದೇವೆ. ಸಮಾನತೆ ದೃಷ್ಟಿಯಲ್ಲಿ ಕಾರ್ಯಕ್ರಮಗಳು ಸರ್ಕಾರದಿಂದ ರೂಪುಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಧೋರಣೆ ಕುರಿತು ಎಲ್ಲ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಬೀಳಗಿ ಆಸ್ಪತ್ರೆಗೆ ೧.೪೭ ಕೋಟಿ ರೂ., ಅನುದಾನ ಮಂಜೂರ ಆಗಿದೆ. ಸರಿಯಾಗಿ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಲು ತಿಳಿಸಲಾಗಿತ್ತು. ಆದರು ಸಂಬAಧಪಟ್ಟವರ ಮೇಲೆ ಶಿಸ್ತು ಕ್ರಮವಾಗಿಲ್ಲ. ಕೂಡಲೇ ಗಮನ ಹರಿಸಬೇಕು. ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನ್, ಎಂ.ಆರ್.ಐ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ರೋಗಿಗಳು ವಿಜಯಪುರಕ್ಕೆ ತೆರಳುವುದು ಅನಿವಾರ್ಯವಾಗಿದೆ. ಜಿಲ್ಲಾ ಆಸ್ಪತ್ರೆಗೆ ಎಂ.ಆರ್.ಐ ತರುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಅಲ್ಲದೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಸರಿಪಡಿಸಬೇಕು ಎಂದು ಶಾಸಕರು ಆಗ್ರಹಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ, ಅಮೃತ ಯೋಜನೆಯಡಿಯಲ್ಲಿ ದಿನದ ೨೪ ಗಂಟೆ ನೀರು ಪೂರೈಸುವ ಕಾರ್ಯದ ಬಗ್ಗೆ ಮಾಹಿತಿ ನೀಡುಬೇಕು. ಪೈಪಲೈನ ಮೂಲಕ ಗ್ಯಾಸ್ ವಿತರಿಸುವ ಕಾರ್ಯ ವಿದ್ಯಾಗಿರಿ ಮತ್ತು ನವನಗರದಲ್ಲಿ ಚಾಲನೆಯಲ್ಲಿದೆ. ಪಿ.ಎಂ ಆವಾಸ್ ಯೋಜನೆಯಡಿ ಮನೆ ನಿರ್ಮಾಣ ಕಾರ್ಯ ಕುಂಠಿತಗೊ0ಡಿದ್ದು, ಪಾವತಿಗೆ ಕ್ರಮವಹಿಸುವ ಅಗತ್ಯವಿದೆ ಎಂದು ತಿಳಿಸಿದರು.