

ಬಾಗಲಕೋಟೆ: ಅಂಧತ್ವವನ್ನು ಮೆಟ್ಟಿನಿಂತು ಅಸಾಧ್ಯವಾದುದನ್ನು ಸಾಧ್ಯವಾಗಿಸಿದವರು ಪುಟ್ಟರಾಜ ಕವಿ ಗವಾಯಿಗಳು, ಅಂಧರು, ಅನಾಥರು, ದೀನ ದಲಿತರಿಗೆ ಸಂಗೀತ ವಿದ್ಯ ಕಲಿಸಿ ಅವರಿಗೆ ಸ್ವತಂತ್ರವಾಗಿ ಬದುಕಲು ಕಲಿಸಿಕೊಟ್ಟ ಮಹಾಪುರುಷರು ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್.ಮೂಗನೂರಮಠ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೧೧೧ ನೇ ಪುಟ್ಟರಾಜ ಗವಾಯಿಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗವಾಯಿಗಳ ವ್ಯಕಿತ್ವ ಅಸಾಧಾರಣವಾದದ್ದು, ಅವರು ಹಿಂದಿ ಭಾಷೆಯಲ್ಲಿ ರಚಿಸಿದ ಬಸವ ಪುರಾಣಕ್ಕೆ ಮಾಜಿ ರಾಷ್ಟçಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಪ್ರಭಾವಿತರಾಗಿ ಗವಾಯಿಗಳನ್ನು ನವದೇಹಲಿಗೆ ಕರೆಸಿ ಸನ್ಮಾನಿಸಿದ್ದರು ಎಂದರು.
ಸAಗೀತಕ್ಕಾಗಿ ರಾಜ್ಯದಲ್ಲಿ ಇರುವ ಶಾಲೆ ಅಂದ್ರೆ ಅದು ನಮ್ಮ ಗದಗ ಜಿಲ್ಲೆಯಲ್ಲಿರುವ ಪಂಚಾಕ್ಷರಿ ಗವಾಯಿಗಳ ಆಶ್ರಮ, ಇವರನ್ನು ತ್ರಿಭಾಷಾ ಕವಿ ಎಂದು ಕರೆಯುತ್ತಿದ್ದರು. ಇವರು ಮೂರು ಭಾಷೆಗಳಲ್ಲಿ ಗ್ರಂಥಗಳು, ಪುರಾಣಗಳು, ವಚನಗಳನ್ನು ರಚಿಸಿದ್ದಾರೆ. ಸಂಗೀತಕ್ಕೆ ಇರುವ ವಾದ್ಯಗಳು ಇವರ ಆಶ್ರಮದಲ್ಲಿ ನೋಡಬಹುದು. ಇವರಿಗೆ ಪದ್ಮಭೂಷಣ ಮತ್ತು ಪದ್ಮವಿಭೂಷÀಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಮಾಜದ ಕಲ್ಯಾಣಕ್ಕೆ ಮತ್ತು ಅಂಧ ಮಕ್ಕಳ ಜೀವನಕ್ಕಾಗಿ ತಮ್ಮ ಜೀವನವನ್ನು ಮೂಡುಪಾಗಿಟ್ಟರು ಎಂದು ಹೇಳಿದರು.
ಸಂಗೀತ ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಮಠ ಮಾತನಾಡಿ, ಮಹಾನ್ ಸಂಗೀತ ಕಲಾವಿದರಿಗೆ ಹೊರ ಹೊಮ್ಮಿದ ಅನೇಕ ಸಂಗೀತಗಾರರು ಇವರ ಆಶ್ರಮದಲ್ಲಿ ಕಲಿತಿದ್ದಾರೆ. ಶಾಸ್ತೀಯ ಸಂಗೀತ, ಹಿಂದೂಸ್ತಾನಿ ಸಂಗೀತ ಆಶ್ರಮದಲ್ಲಿ ಹೇಳಿಕೊಡಲಾಗುತ್ತದೆ. ನಮ್ಮ ಕಣ್ಣೆದುರಿಗೆ ಕಾಣುವ ಪವಾಡ ಪುರುಷÀರೆಂದರೆ ನಮ್ಮ ಪುಟ್ಟರಾಜ ಗವಾಯಿಗಳು ಎಂದು ಬಣ್ಣಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಆರ್.ಎಂ.ಬೆಣ್ಣೂರ, ಶ್ರೇಯಾ ಜೋರಾಪುರ, ಡಾ.ಅಪ್ಪು ರಾಠೋಡ ಐಕ್ಯೂಎಸಿ ಸಂಯೋಜಕಿ ಡಾ.ಎ.ಯು.ರಾಠೋಡ ಇದ್ದರು.