ಪುಟ್ಟರಾಜ ಗವಾಯಿಗಳು ದಾರಿದೀಪ

IMG_20230724_185446
Published on

ಬಾಗಲಕೋಟೆ: ಮಾನವನ ಹುಟ್ಟು ಸಹಜವಾದರೂ ಕೇಲವು ಮಕ್ಕಳ ಹುಟ್ಟುವಾಗ ದಿವ್ಯಾಂಗವಾಗಿ ಜನಿಸುತ್ತಾರೆ. ಆದರೆ ಅವರು ಬೆಳವಣಿಗೆಯಾದಂತೆ ಸಮಾಜದಲ್ಲಿ ವಿಶೇಷ ಸಾಧಕರಾಗುತ್ತಾರೆ. ಸಂಗೀತ ಭೂಷಣರಾದ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ದಿವ್ಯಾಂಗ ಮಕ್ಕಳಿಗೆ ದಾರಿದೀಪವಾಗಿದ್ದಾರೆ ಎಂದು ಡಾ.ಎಲ್.ಎಸ್.ಚಂದರಗಿ ಹೇಳಿದರು.

ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೨೨-೨೩ ನೇ ಸಾಲಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಕಾರ್ಯಕ್ರಮದಲ್ಲಿ ದಿವ್ಯಾಂಗ ಒಂದು ವರ ಶಾಪವಲ್ಲ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.

ಗಾನಯೋಗಿ ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಇಡೀ ವಿಶ್ವವೇ ಮೆಚ್ಚಿ ಮನಸೋತಿದೆ. ಹೀಗಾಗಿ ದಿವ್ಯಾಂಗ ಒಂದು ವರ ಅದು ಶಾಪವಲ್ಲ, ಸಂಗೀತ, ಸಾಂಸ್ಕೃತಿಕ ರಂಗದಲ್ಲಿ ದಿವ್ಯಾಂಗ ಮಕ್ಕಳ ವಿಶೀಷ್ಟ ಸಾಧಕರಾಗಿ ಬೆಳದಿದ್ದಾರೆ ಎಂದರು.
ಸಮಗ್ರ ಜೀವನ ವಿಕಾಸ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಉದಪುಡಿ ಮಾತನಾಡಿ, ದಿವ್ಯಾಂಗದಲ್ಲಿ ದೃಷ್ಟಿ, ಮೂಕ, ಕಿವುಡ, ದೈಹಿಕ ಮತ್ತು ಮಾನಸಿಕ ಎಂಬ ಐದು ಪ್ರಕಾರಗಳು ಕಾಣುತ್ತೇವೆ. ದಿವ್ಯಾಂಗ ಎನ್ನುವುದು ಶ್ರೇಷ್ಠವಾದದ್ದು, ಇವರಿಗೆ ದೇವರು ವಿಶೀಷ್ಟ ಸಾಮರ್ಥ್ಯ ನೀಡಿದ್ದಾನೆ. ೧೯೯೯ ರಿಂದ ದಿವ್ಯಾಂಗ ಮಕ್ಕಳಿಗೆ ವಿಶೇಷ ಅವಕಾಶಗಳು ದೊರೆಯುತ್ತಿವೆ. ದಿವ್ಯಾಂಗ ಮಕ್ಕಳ ಸಮಾಜದಲ್ಲಿ ಸರ್ವಶ್ರೇಷ್ಠ ಸಾಧಕರಾಗುತ್ತಾರೆ ಎಂದು ಹೇಳಿದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ಸಿದ್ದಲಿಂಗಪ್ಪನವರ, ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯ ಶಶಿಧರ ಜಗಜಿನ್ನಿ, ಎನ್.ಎಸ್.ಎಸ್ ಸಂಯೋಜನಾಽಕಾರಿ ಡಾ.ಭಾಷ್ಕರ ಅಶೋಕ ಮುಂಡೇವಾಡಿ, ಸಹ ಶಿಬಿರಾಧಿಕಾರಿ ಡಾ.ಚಂದ್ರಶೇಖರ ಕಾಳನ್ನವರ, ಡಾ.ನಾಗಮ್ಮಾ ಉಪಸ್ಥಿತರಿದ್ದರು. ಪ್ರಾರ್ಥಿಸಿದರು. ಸವಿತಾ ಗಂಟಿಮಠ ಸ್ವಾಗತಿಸಿದರು. ಮಲ್ಲಿಕಾರ್ಜುನ ಇಟಗಿ ನಿರೂಪಿಸಿದರು. ಭೀಮನಗೌಡ ಗೌಡರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net