ಪುಟ್ಟಣ್ಣಯ್ಯ ಸಮಾಧಿ, ಪುತ್ಥಳಿಗೆ ಪೂಜೆ

23-pnp 2
Published on

ಪಾಂಡವಪುರ: ವಿಶ್ವ ರೈತ ದಿನಾಚರಣೆ ಮತ್ತು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ರೈತಸಂಘ ಕಾರ್ಯಕರ್ತರು ಮತ್ತು ಮುಖಂಡರು ತಾಲೂಕಿನ ಕ್ಯಾತನಹಳ್ಳಿಯಲ್ಲಿರುವ ಪುಟ್ಟಣ್ಣಯ್ಯ ಅವರ ಸಮಾಧಿ ಮತ್ತು ಪುತ್ಥಳಿಗೆ ಪೂಜೆ ಸಲ್ಲಿಸಿದರು.

ತಾಲೂಕಿನ ವಿವಿಧೆಡೆ ರೈತ ದಿನಾಚರಣೆಯನ್ನು ಆಚರಿಸಿದ ರೈತಸಂಘ ಕಾರ್ಯಕರ್ತರು ಗ್ರಾಮಗಳಲ್ಲಿರುವ ರೈತಸಂಘದ ನಾಮಫಲಕಗಳಿಗೆ ಹಾರ ಹಾಕಿ ಪೂಜೆ ನೆರವೇರಿಸಿದರು. ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಗ್ರಾಮದ ಹಿರಿಯರಿಗೆ ಸರ್ಕಾರದಿಂದ ಸಿಗುವ ಮಾಸಾಸನ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮಾಜಿ ಅಧ್ಯಕ್ಷ ನಾಗರಾಜು, ಎಣ್ಣೆಹೊಳೆಕೊಪ್ಪಲು ಮಂಜು, ರಾಘು, ಕೃಷ್ಣಪ್ಪ, ರಾಘವೇಂದ್ರ, ಪ್ರಕಾಶ್, ಪಾರ್ಥಸಾರಥಿ, ಸವಿನ್, ಬಾಲಕೃಷ್ಣ, ರಾಮಕೃಷ್ಣೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net