ಪುಟ್ಟ ಪೋರಿಯ ಅಗಾಧ ಸಾಧನೆ

bkt-4-7
Published on

ಬಾಗಲಕೋಟೆ: ಆಕೆಯ ಕೇವಲ ೧.೯ ವರ್ಷದ ಪುಟ್ಟ ಪೋರಿಯಾದರೂ ಜ್ಞಾಪಕಶಕ್ತಿಯಲ್ಲಿ ಅಗಾಧ ಪ್ರತಿಭೆಯುಳ್ಳವಳು. ಚಿಕ್ಕವಯಸ್ಸಿನಲ್ಲೇ ದಾಖಲೆಯ ಮಾಲೆ ಮುಡಿಗೇರಿಸಿಕೊಂಡವಳು.

ನಗರದ ಉದ್ಯಮಿ ಗಣಪತಿ(ರಾಜು) ವಾಘ ಅವರ ಮೊಮ್ಮಗಳಾದ ಹುಬ್ಬಳ್ಳಿ ಸ್ವರಾಲಿ ಕಾಟ್ಕರ್ ಯಶೋಗಾಥೆಯಿದು. ಪ್ರಜಕ್ತಾ ರಾಕೇಶ ದಂಪತಿಗಳ ಪುತ್ರಿಯಾದ ಸ್ವರಾಲಿ ಚಿಕ್ಕ ವಯಸ್ಸಿನಲ್ಲೇ ೧೨ ಹಣ್ಣುಗಳು, ೧೧ ತರಕಾರಿ, ೨೫ ಪ್ರಾಣಿ, ದೇಹದ ೧೪ ಅಂಗಾAಗಗಳು, ೮ ವಿಧದ ಪಕ್ಷಿ, ೭ ಆಕಾರಗಳು, ೧೨ ವಾಹನಗಳು, ೧೦ ವೃತ್ತಿ, ೭ ದೇಶದ ಬಾವುಟಗಳನ್ನು ಗುರುತಿಸುವುದಲ್ಲದೇ ೫೨ ಇಂಗ್ಲಿಷ್ ಶಬ್ದ, ಅಕ್ಷರಮಾಲೆ, ೧ ರಿಂದ ೮ರವರೆಗೆ ಸಂಖ್ಯೆಯನ್ನು ಎಣಿಸುವ ಪ್ರತಿಭೆ ಹೊಂದಿದ್ದಾಳೆ.

ಆಕೆಯ ಪ್ರತಿಭೆಯನ್ನು ಗುರುತಿಸಿ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್ನಲ್ಲಿ ಆಕೆಯ ಹೆಸರಿನಲ್ಲಿ ದಾಖಲೆ ಸೃಷ್ಟಿಯಾಗಿದೆ. ಕಲಾಂ ವರ್ಲ್ಡ್ ರೆಕಾರ್ಡ್ ದಾಖಲೆಯನ್ನೂ ಆಕೆ ಸೃಷ್ಟಿಸಿದ್ದು, ಮೊಮ್ಮಗಳ ಸಾಧನೆ ಬಗ್ಗೆ ರಾಜು ವಾಘ ಅವರು ಅಭಿಮಾನದ ನುಡಿಗಳನ್ನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net