ಪಿಯು ಫಲಿತಾಂಶದಲ್ಲಿ ಫೇಲಾಗಿದ್ದಕ್ಕೆ ಎಂಟು ವಿದ್ಯಾರ್ಥಿಗಳು ಆತ್ಮಹತ್ಯೆ

Pu Result
Published on

ಬೆಂಗಳೂರು: ಪಿಯು ಫಲಿತಾಂಶದಲ್ಲಿ ಫೇಲಾಗಿದ್ದಕ್ಕೆ ಎಂಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿರ್ಧರಿಸಿದ್ದ ಬಳ್ಳಾರಿ ಜಿಲ್ಲೆ ಹೊಸಪೇಟೆಯ ಶ್ರೇಯಾ ಎಸ್. ಕದಮ್ ಸ್ನೇಹಿತೆ ರೂಪಾಳನ್ನು ರೈಲ್ವೆ ಹಳಿ ಬಳಿ ಕರೆದೊಯ್ದಿದ್ದಾಳೆ. ಖಿನ್ನಳಾಗಿದ್ದ ಸ್ನೇಹಿತೆಯನ್ನು ರೂಪಾ ಮನವೊಲಿಸುತ್ತಿರುವಾಗ ಎದುರಿಗೆ ಬಂದ ಗೂಡ್ಸ್ ರೈಲಿಗೆ ಮೈಯೊಡ್ಡಿದ ಶ್ರೇಯಾ ತೀವ್ರ ಗಾಯಗೊಂಡಿದ್ದಾಳೆ. ಚಿಕಿತ್ಸೆಗೆಂದು ವಿಮ್ಸ್​ಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವಿಗೀಡಾಗಿದ್ದಾಳೆ. ಸ್ನೇಹಿತೆ ರೂಪಾಗೂ ರೈಲು ತಾಗಿ ಗಾಯಗಳಾಗಿವೆ.

ಕೋಲಾರದ ಬೆಳ್ಳೂರಿನ ಆದಿತ್ಯ ಚಕ್ರವರ್ತಿ(19) ಇಂಗ್ಲಿಷ್ ವಿಷಯದಲ್ಲಿ ಫೇಲಾಗಿದ್ದಕ್ಕೆ ನರಸಾಪುರ ದೊಡ್ಡ ಕೆರೆಗೆ ಹಾರಿದ್ದಾನೆ. ಹರಿಹರದಲ್ಲಿ ಎಂಕೆಇಟಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಜಯರಾಮ್ (18) ನೇಣು ಬಿಗಿದುಕೊಂಡಿದ್ದಾನೆ. ಶಿವಮೊಗ್ಗದ ಚಿಕ್ಕಮರಸ ಗ್ರಾಮದ ವಿದ್ಯಾರ್ಥಿನಿ ಚಿತ್ರಾ (17) ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡಿದ್ದಾಳೆ. ಅರಕಲಗೂಡು ತಾಲೂಕಿನ ದಾಸಯ್ಯನಕೊಪ್ಪಲು ಗ್ರಾಮದ ಭೂಮಿಕಾ (18) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿನಲ್ಲಿ ವಿನಾಯಕನಗರ ನಿವಾಸಿ ರಾಹುಲ್ ರೆಡ್ಡಿ (21) ನೇಣು ಬಿಗಿದುಕೊಂಡಿದ್ದರೆ, ಬಾಬಾನಗರ ನಿವಾಸಿ ಪ್ರವೀಣ್ (19) ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರದ ಕಾಮಸಮುದ್ರ ಕೇತಗಾನಹಳ್ಳಿ ಕಾಂತ (17) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡಿಸ್ಟಿಂಕ್ಷನ್ ಬಂದರೂ ನೇಣಿಗೆ ಮೊರೆ

ದ್ವಿತೀಯ ಪಿಯುಸಿಯಲ್ಲಿ ಶೇ.89 ಅಂಕ ಪಡೆದರೂ ಕಡಿಮೆ ಅಂಕ ಬಂತು ಎಂದುಕೊಂಡು ತುಮಕೂರು ಜಿಲ್ಲೆ ಕ್ಯಾತಸಂದ್ರ ಬಳಿಯ ಬಸವಾಪಟ್ಟದ ಚೇತನ್(18) ನೇಣು ಹಾಕಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net