ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್: ಕಳೆನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

Girl Suicide
Published on

ಹಾಸನ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.

ಮಲ್ಲಿ ಪಟ್ಟಣ ಹೋಬಳಿ ಕೋಠಿ ದಾಸಯ್ಯನ ಕೊಪ್ಪಲು ಗ್ರಾಮದ ಭೂಮಿಕ (18) ಆತ್ಮಹತ್ಯೆಗೀಡಾದ ವಿದ್ಯಾರ್ಥಿನಿ. ಹಾಸನ ವಿಭಜಿತ ಪಿಯು ಕಾಲೇಜಿನ ಈ ವಿದ್ಯಾರ್ಥಿನಿ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಅನುತೀರ್ಣಗೊಂಡ ಪರಿಣಾಮ ಮನನೊಂದು ಕಳೆನಾಶಕ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈಕೆಯನ್ನು ಸರ್ಕಾರಿ ಆಸ್ಪತ್ರೆ ಅರಕಲಗೂಡಿಗೆ ತಂದು ಸೇರಿಸಿ ನಂತರ ಹಾಸನಕ್ಕೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಯಿತು. ಆದರೂ ರಾತ್ರಿ 8 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವುಗೀಡಾಗಿದ್ದಾಳೆ. ಅರಕಲಗೂಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net