

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚುತ್ತಿದ್ದು, ಜನ ಜಾಗೃತರಾಗಬೇಕು ಎಂದು ಕಲಬುರಗಿ ಹೈಕೋರ್ಟ್ ಹೆಚ್ಚುವರಿ ರಿಜಿಸ್ಟಾçರ್ ಜನರಲ್ ಮರುಳಸಿದ್ದರಾಧ್ಯ ಎಚ್.ಜೆ. ಕಿವಿಮಾತು ಹೇಳಿದರು.
ನಗರದ ಸಿದ್ಧಾರ್ಥ ಕಾನೂನು ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಸೈಬರ್ ಕ್ರೈಂ ಕುರಿತು ಕಾನೂನು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಪ್ರತಿಯೊಬ್ಬರೂ ಟೆಕ್ನಾಲಜಿ ಅವಲಂಬಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಜನರಿಗೆ ಮೋಸ ಮಾಡುವಂತಹ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್ ಕ್ರೈಂ ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಸಾಮಾಜಿಕ ಪಿಡುಗಾಗಿ ಕಾಡುತ್ತಿದೆ. ಈ ಕ್ರೈಂ ಮಾಡುವವರನ್ನು ಹಿಡಿಯುವುದು ಅಷ್ಟು ಸುಲಭವಲ್ಲ. ಯಾವುದೇ ಸಾಕ್ಷಿ ಸಿಗುವುದಿಲ್ಲ. ಹೀಗಾಗಿ ಜನಜಾಗೃತಿ ಮೂಡಿಸುವ ಆಂದೋಲನ ಅಗತ್ಯ ಎಂದರು.
ಜಿ¯್ಲÁ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹ್ಮದ್ ಅನ್ವರ್ ಹುಸೇನ್ ಮೊಗಲಾನಿ ಮಾತನಾಡಿ, ದೇಶದಲ್ಲಿ ಸೈಬರ್ ಕ್ರೈಂ ಅಪಾಯಕಾರಿ ಹಂತದಲ್ಲಿ ಬೆಳೆಯುತ್ತಿದೆ. ಅಮಾಯಕರು ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಎಚ್ಚರಿಕೆೆ ವಹಿಸಬೇಕು ಎಂದು ಹೇಳಿದರು
ಸಿದ್ಧಾರ್ಥ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಚಂದ್ರಶೇಖರ, ಪೊಲೀಸ್ ಉಪ ಆಯುಕ್ತ ದೀಪನ್ ಎಂ.ಎನ್. ಮಾತನಾಡಿದರು. ಕರ್ನಾಟಕ ಪೀಪಲ್ಸ್ ಎಜ್ಯುಕೇಷನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ರಾತ್ರಿಕರ್, ಡಾ.ಬಿ.ಎಸ್.ಗುಳಶೆಟ್ಟಿ, ಬಿ.ಎಂ.ರಾವೂರ್, ಡಾ.ಚಂದ್ರಶೇಖರ ಶೀಲವಂತ, ನರೇಂದ್ರ ಬಡಶೇಷಿ ಇತರರಿದ್ದರು.