

ಕಲಬುರಗಿ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನದ ಯುಕ್ತಿ-೨೦೨೫ ಸಾಂಸ್ಕೃತಿಕ ಉತ್ಸವದ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪಿಡಿಎ ಇಂಜಿನಿಯರಿAಗ್ ಕಾಲೇಜು ಸಮಗ್ರ ಪ್ರಶಸ್ತಿ ಬಾಚಿಕೊಂಡರೆ, ಬೀದರ್‌ನ ಗುರುನಾನಕ ದೇವ್ ಇಂಜಿನಿಯರಿAಗ್ ಕಾಲೇಜು(ಜಿಎನ್‌ಡಿಇಸಿ) ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿದೆ.
ಪ್ರಕಲ್ಪ ಪ್ರಸ್ತುತಿ ಸ್ಪರ್ಧೆಯಲ್ಲಿ ಪಿಡಿಎ ಕಾಲೇಜು ವಿನ್ನರ್, ಬೀದರ್ ಜಿಎನ್‌ಡಿಇಸಿ ರನ್ನರ್‌ಅಪ್, ಚಾಣಾಕ್ಷ ಸ್ಪರ್ಧೆಯಲ್ಲಿ ಪಿಡಿಎ ಕಾಲೇಜು ವಿನ್ನರ್ ಮತ್ತು ರನ್ನರ್ ಆಗಿದೆ. ರೋಬೊರೇಸ್‌ನಲ್ಲಿ ಕಲಬುರಗಿಯ ಶೆಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿನ್ನರ್, ಕಲಬುರಗಿ ವಿಟಿಯು ಸಿಪಿಜಿಎಸ್ ರನ್ನರ್‌ಅಪ್, ಕ್ವಿಜ್‌ನಲ್ಲಿ ಬೀದರ್ ಎಲ್‌ಎಇಸಿ ವಿನ್ನರ್, ಕಲಬುರಗಿ ವಿಟಿಯು ಸಿಪಿಜಿಎಸ್ ರನ್ನರ್‌ಅಪ್ ಆಗಿದೆ.
ವಾಗ್ಮಿತಾ ಸ್ಪರ್ಧೆಯಲ್ಲಿ ಎಸ್.ಬಿ. ಸೈನ್ಸ್ ಕಾಲೇಜು ರನ್ನರ್, ರಾಯಚೂರು ಎನ್‌ಐಟಿ ರನ್ನರ್, ದಕ್ಷ ಸ್ಪರ್ಧೆಯಲ್ಲಿ ದಾವಣಗೆರೆಯ ಆರ್‌ಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ರನ್ನರ್, ಫೈನಾನ್ಸ್ ಸ್ಪರ್ಧೆಯಲ್ಲಿ ಕಲಬುರಗಿ ಗುರುಕುಲ ಡಿಗ್ರಿ ಕಾಲೇಜು ವಿನ್ನರ್, ಭಾಲ್ಕಿ ಬಿಕೆಐಟಿ ರನ್ನರ್, ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ಶರಣಬಸವ ವಿಶ್ವವಿದ್ಯಾಲಯ ವಿನ್ನರ್, ದಾವಣಗೆರೆ ಆರ್‌ಜಿಐಸಿಎಂ ರನ್ನರ್‌ಅಪ್ ಪಡೆದಿದೆ.
ಮಾನವ ಸಂಸಾಧನ (ಎಚ್‌ಆರ್) ಸ್ಪರ್ಧೆಯಲ್ಲಿ ರಾಯಚೂರು ಎನ್‌ಐಟಿ ವಿನ್ನರ್, ದಾವಣಗೆರೆ ಆರ್‌ಜಿಐಸಿಎಂ ರನ್ನರ್, ಸ್ಟಾರ್ಟಪ್‌ನಲ್ಲಿ ದಾವಣಗೆರೆ ಆರ್‌ಜಿಐಸಿಎಂ ವಿನ್ನರ್, ಸುರಪುರ ವಿಎನ್‌ಇಸಿ ರನ್ನರ್, ಸೋಲೋ ಸಿಂಗಿAಗ್‌ನಲ್ಲಿ ಬೀದರ್ ಜಿಎನ್‌ಡಿಇಸಿ ವಿನ್ನರ್, ಬಸವಕಲ್ಯಾಣ ಬಿಕೆಇಸಿ ರನ್ನರ್, ಸಮೂಹ ಗಾಯನದಲ್ಲಿ ಬಳ್ಳಾರಿ ಆರ್‌ವೈಎಂಇಸಿ ವಿನ್ನರ್, ಬೀದರ್ ಜಿಎನ್‌ಡಿಇಸಿ ರನ್ನರ್ ಅಪ್‌ಗೆ ಭಾಜನವಾಗಿವೆ.
ಸೋಲೋ ಡಾನ್ಸ್ನಲ್ಲಿ ಬೀದರ್ ಎಲ್‌ಎಇಸಿ ವಿನ್ನರ್, ಶರಣಬಸವ ವಿವಿ ರನ್ನರ್, ಸಮೂಹ ಗಾಯನದಲ್ಲಿ ಬೀದರ್ ಎಲ್‌ಎಇಸಿ ವಿನ್ನರ್, ಕಲಬುರಗಿ ವಿಟಿಯು ಸಿಪಿಜಿಎಸ್ ರನ್ನರ್, ರ‍್ಯಾಂಪ್ ವಾಕ್‌ನಲ್ಲಿ ಬೀದರ್ ಜಿಎನ್‌ಡಿಸಿಇ ವಿನ್ನರ್, ಆರ್‌ಜಿ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ರನ್ನರ್, ಸ್ಪಾಟ್ ಫೋಟೋಗ್ರಾಫಿಯಲ್ಲಿ ಶರಣಬಸವ ವಿವಿ ವಿನ್ನರ್, ಪಿಡಿಎ ಕಾಲೇಜು ರನ್ನರ್, ಶಾರ್ಟ್ ಫಿಲ್ಮ್ನಲ್ಲಿ ಬಳ್ಳಾರಿ ಆರ್‌ವೈಎಂಇಸಿ ವಿನ್ನರ್, ಬಸವಕಲ್ಯಾಣ ಬಿಕೆಇಸಿ ರನ್ನರ್ ಅಪ್ ಆಗಿದೆ.
ಸ್ಕೆಚ್ ಆರ್ಟ್ನಲ್ಲಿ ಭಾಲ್ಕಿ ಬಿಕೆಐಟಿ ವಿನ್ನರ್, ಪಿಡಿಎ ಕಾಲೇಜು ರನ್ನರ್, ಪೇಂಟಿAಗ್‌ನಲ್ಲಿ ಬಳ್ಳಾರಿ ಬಿಐಟಿಎಂ ವಿನ್ನರ್ ಮತ್ತು ರನ್ನರ್ ಅಪ್ ಪಡೆದುಕೊಂಡಿದೆ. ಸೆಲ್ಫಿ ಪಾಯಿಂಟ್‌ನಲ್ಲಿ ಭಾಲ್ಕಿ ಬಿಕೆಐಟಿ ವಿನ್ನರ್, ಕಲಬುರಗಿ ವಿಟಿಯು ಸಿಪಿಜಿಎಸ್ ರನ್ನರ್, ಟ್ರೆಷರ್ ಹಂಟ್ ಸ್ಪರ್ಧೆಯಲ್ಲಿ ದೊಡ್ಡಪ್ಪ ಫೆಕಲ್ಟಿ ಆಫ್ ಬಿಜಿನೆಸ್ ವಿನ್ನರ್, ಪಿಡಿಎ ಕಾಲೇಜು ರನ್ನರ್, ಕದನ ಸ್ಪರ್ಧೆಯಲ್ಲಿ ಕಲಬುರಗಿ ಆರ್ಯನ್ ಫಾರ್ಮಸಿ ಕಾಲೇಜು ವಿನ್ನರ್, ಬಳ್ಳಾರಿ ಆರ್‌ವೈಎಂಇಸಿ ರನ್ನರ್ ಅಪ್ ಆಗಿ ಹೊರಹೊಮ್ಮಿವೆ.