

ಬಾಗಲಕೋಟೆ: ಜಿಲ್ಲೆಯ ಇಳಕಲ್ಲ ಪಿಎಫಐ ಮುಖಂಡರ ಮನೆ ಮೇಲೆ ಪೋಲಿಸರು ಶನಿವಾರ ದಾಳೆ ನಡೆಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು.
ಪಿಎಫಐ ಮುಖಂಡ ರಿಯಾಜ್ ಬನ್ನು ಮತ್ತು ರಫಿಕ ನದಾಫ ಇಳಕಳ ಪೊಲೀಸಸರು ತಲಾಶ್ ನಡೆಸಿದರು. ಇಳಕಲ್ಲ ನಗರದ ಆಲಂಪುರಪೇಠೆಯಲ್ಲಿರುವ ಇಬ್ಬರು ಮುಖಂಡರು ಮನೆಗಳಲ್ಲಿ ಇರುವ ಕೆಲ ದಾಖಲಾತಿಗಳ ಪರಿಶೀಲನೆ ಮಾಡಿದರು. ಪೊಲೀಸರ ತನಿಖೆಗೆ ಸಹಕರಿಸೋದಾಗಿ ಹೇಳಿದ ಮುಸ್ಲಿಂ ಸಮುದಾಯದ ಮುಖಂಡ ಶಾಮೀದ ರೇಷ್ಮಿ ತಿಳಿಸಿದ್ದಾರೆ. ಹುನಗುಂದ ಜೆಎಂಎಫ್ ಸಿ ನ್ಯಾಯಾಲಯದಿಂದ ಸರ್ಚ ವಾರೆಂಟ್ ಪಡೆದು ಪರಿಶೀಲನೆ ಮಾಡಿದ್ದಾರೆ. ಯಾವುದೇ ಮಹತ್ವದ ದಾಖಲಾತಿ ಸಿಗದೆ ಪೊಲೀಸರು ವಾಪಸ್ಸ ಆಗಿದ್ದಾರೆ.