ಪಿಂಚಣಿ ಹಣ ಸಮರ್ಪಕವಾಗಿ ನೀಡಿ

21 HANUR 2
ಅಜ್ಜೀಪುರ ಗ್ರಾಮದ ಅಂಚೆ ಕಚೇರಿಯ ಮುಂಭಾಗ ಪಿಂಚಣಿ ಪಡೆಯಲು ವೃದ್ಧರು ಕಾದು ಕುಳಿತಿರುವುದು.
Published on

ಹನೂರು: ಪಿಂಚಣಿ ಹಣವನ್ನು ಸಮರ್ಪಕವಾಗಿ ನೀಡುವಂತೆ ವೃದ್ಧರು ಬುಧವಾರ ಅಜ್ಜೀಪುರ ಗ್ರಾಮದ ಅಂಚೆ ಕಚೇರಿಯ ಮುಂಭಾಗ ಜಮಾಯಿಸಿ ಒತ್ತಾಯಿಸಿದರು.

ಅಂಚೆ ಕಚೇರಿ ನೌಕರ ಕುಮಾರ್ ತಿಂಗಳಿಗೊಮ್ಮೆ ಸರಿಯಾಗಿ ಪಿಂಚಣಿ ಹಣವನ್ನು ನೀಡುತ್ತಿಲ್ಲ. ಜತೆಗೆ ಸಕಾಲಕ್ಕೆ ಕಚೇರಿಗೂ ಆಗಮಿಸುತ್ತಿಲ್ಲ. ಈ ಬಗ್ಗೆ ಕೇಳಿದರೆ ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ. ಇತ್ತ ಫೋನ್ ಕರೆಗೂ ಸ್ಪಂದನೆಯಿಲ್ಲ. ಇದರಿಂದ ಪಿಂಚಣಿಯನ್ನು ಪಡೆದುಕೊಳ್ಳಲು ಕಳೆದ 4 ದಿನಗಳಿಂದಲೂ ಕಚೇರಿಗೆ ಅಲೆಯುತ್ತಿದ್ದು, ತುಂಬ ತೊಂದರೆ ಅನುಭವಿಸುತ್ತಿದ್ದೇವೆ. ಪಿಂಚಣಿ ಹಣ ಸಿಗದೆ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಕಾಲಕ್ಕೆ ಮನೆಗಳಿಗೆ ಪಿಂಚಣಿ ಹಣ ತಲುಪಿಸುವ ವ್ಯವಸ್ಥೆ ಮಾಡುವುದರ ಮೂಲಕ ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಅನುಕೂಲ ಕಲ್ಪಿಸುವಂತೆ ವೃದ್ಧೆ ಆನಂದಮ್ಮ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net