ಪಿ.ಹೊಸಹಳ್ಳಿಯಲ್ಲಿ ಮಾರಮ್ಮ ದೇವಿಗೆ ವಿಶೇಷ ಪೂಜೆ

06 HRS 01
Published on

ಹಿರೀಸಾವೆ: ಹೋಬಳಿಯ ಪಿ.ಹೊಸಹಳ್ಳಿ ಗ್ರಾಮದ ಶ್ರೀ ಮಾರಮ್ಮದೇವಿ ಸನ್ನಿಧಿಯಲ್ಲಿ ಮೊದಲ ವಾರ್ಷಿಕೋತ್ಸವದ ಪ್ರಯುಕ್ತ ಇತ್ತೀಚೆಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.


ಗಣಪತಿ ಹಾಗೂ ಗಂಗೆ ಪೂಜೆಯೊಂದಿಗೆ ಹೋಮ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ಜರುಗಿತು. ದೇವಿಗೆ ಅಭಿಷೇಕ, ಪುಷ್ಪಾರ್ಚನೆ ಬಳಿಕ ಆರತಿ ಬೆಳಗಿಸಲಾಯಿತು.

ಹರಕೆ ಹೊತ್ತಿದ್ದ ಭಕ್ತರು ರವಿಕೆ ಕಣ, ಅರಿಶಿಣ-ಕುಂಕುಮ ಹಾಗೂ ಮಡಿಲಕ್ಕಿ ಅರ್ಪಿಸಿದರು. ಮಹಾಮಂಗಳಾರತಿ ನೆರವೇರಿದ ನಂತರ ಅನ್ನದಾಸೋಹ ನಡೆಯಿತು. ನಾಗನಹಳ್ಳಿ, ಪುರ, ಉಳ್ಳಾವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.
250 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಮಾರಮ್ಮ ದೇವಿಯ ದೇಗಲ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಕಳೆದ ವರ್ಷ ಜೀರ್ಣೋದ್ಧಾರಗೊಳಿಸಿ ಉದ್ಘಾಟನೆ ನೆರವೇರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net