ಪಾರ್ಥೇನಿಯಂ ನಿರ್ಮೂಲನೆ ಅವಶ್ಯ

bkt-25-3
ಪಾರ್ಥೇನಿಯಂ ಕಳೆ ನಿರ್ಮೂಲನಾ ಸಪ್ತಾಹದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಐ. ಸಿ. ಎ.ಆರ್ ಮತ್ತು ಕೃಷಿ ವಿಜ್ಞಾನ ಕೇಂದ್ರ ಜಂಟಿಯಾಗಿ ಭಾನುವಾರ ಬಾಗಲಕೋಟೆ ನಗರದಲ್ಲಿ ಕೆವಿಕೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ.
Published on

ಬಾಗಲಕೋಟೆ: ಪಾರ್ಥೇನಿಯಂ ಅಥವಾ ಕಾಂಗ್ರೆಸ್ ಕಳೆ ಭಾರತದ ಕೃಷಿ ಹಾಗೂ ಪರಿಸರದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಇದು ಬೆಳೆಗಳ ಮೇಲೆ ಹಲವಾರು ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರ ನಿವಾರಣೆ ಅತ್ಯವಶ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಆರ್.ಏ. ನಂದಾಗವಿ ಹೇಳಿದರು.

ಪಾರ್ಥೇನಿಯಂ ಕಳೆ ನಿರ್ಮೂಲನಾ ಸಪ್ತಾಹದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಐ. ಸಿ. ಎ.ಆರ್ ಮತ್ತು ಕೃಷಿ ವಿಜ್ಞಾನ ಕೇಂದ್ರ ಜಂಟಿಯಾಗಿ ಭಾನುವಾರ ಕೆವಿಕೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಅವರು ಮಾತನಾಡಿದರು.
ಪಾರ್ಥೇನಿಯಂ ಕಳೆ ಜಲ, ಪೋಷಕಾಂಶ, ಮತ್ತು ಬೆಳಕನ್ನು ಹೆಚ್ಚು ಶೋಷಿಸುತ್ತದೆ. ಇದು ಕೃಷಿ ಬೆಳೆಗಳಿಗೆ ಬೇಕಾದ ಸಂಪನ್ಮೂಲಗಳ ಮೇಲೆ ಸ್ಪರ್ಧೆ ಮಾಡುತ್ತದೆ, ಬೆಳೆಗಳ ಬೆಳವಣಿಗೆಯನ್ನು ಕುಗ್ಗಿಸುತ್ತದೆ.ಮಣ್ಣಿನ ಫಲಶೀಲತೆ ಇಳಿಸುತ್ತದೆ ಎಂದರು.

ಕೆವಿಕೆ ತಾಂತ್ರಿಕ ಅಽಕಾರಿ ಡಾ.ಸಿದ್ದಪ್ಪ ಅಂಗಡಿ ಮಾತನಾಡಿ, ಈ ಕಳೆ ಕೆಲವು ರೋಗಗಳು ಮತ್ತು ಕೀಟಗಳಿಗೆ ಆತಿಥ್ಯನನ್ನು ನೀಡುತ್ತದೆ. ಅಲ್ಲದೆ ಪಾರ್ಥೇನಿಯಂ ನಿಂದ ವಾತಾವರಣದಲ್ಲಿ ಉಸಿರಾಟ ಸಮಸ್ಯೆಗಳಿಗೆ ಕಾರಣವಾಗುವ ರಾಸಾಯನಿಕಗಳು ಹೊರಹೋಗುತ್ತವೆ. ಇದರಿಂದ ಕೃಷಿ ಶ್ರಮಿಕರು ಮತ್ತು ಮಾಲಿನ್ಯಕ್ಕೆ ತೊಂದರೆಗಳು ಉಂಟಾಗಬಹುದು. ಹೀಗಾಗಿ, ಪಾರ್ಥೇನಿಯಂ ಅನ್ನು ನಿಯಂತ್ರಿಸಲು ಮತ್ತು ನಿವಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಕೃಷಿಕರಿಗಾಗಿ ಅತ್ಯಂತ ಮುಖ್ಯವಾಗಿದೆ ಎಂದರು.

ಯುವ ರೆಡ್ ಸಂಸ್ಥೆಯ ಪ್ರವೀಣ ಹಿರೇಕುಂಬಿ ಮಾತನಾಡಿ, ಭಾರತೀಯ ರೆಡ್ ಸಂಸ್ಥೆಯು ಕೇವಲ ಆರೋಗ್ಯ ಸಂಬಂಧಿಸಿದ ಸೇವೆಗಳಷ್ಟೇ ಅಲ್ಲದೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮತ್ತು ಎಲ್ಲ ಸೇವಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತದೆ ಎಂದರು.

ಯುವ ರೆಡ್ ಕ್ರಾಸ್ ಸಂಸ್ಥೆಯ ಸೇವಾಕರ್ತ ಹರ್ಷ ಜಿಗಜಿನ್ನಿ, ಸಚಿನ ಬೀಳಗಿ, ಪ್ರಸನ್ನ ಹಂಚಾಟೆ, ದರ್ಶನ ಜಿಗಜಿನ್ನಿ ಇತರರು ಹಾಗೂ ಕೃಷಿ ವಿಜ್ಞಾನಿಗಳ ಡಾ.ಸುಧಾ, ಡಾ.ಭವ್ಯ ಎಂ. ಆರ್.., ಡಾ.ರಮಿತ, ಡಾ.ವೆಂಕಣ್ಣ ಬಳಗಾನೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net