ಪಾದಯಾತ್ರೆ ಮೂಲಕ ಹೋರಾಟಕ್ಕೆ ಕೈ ಜೋಡಿಸಿದ ನ್ಯಾಯವಾದಿಗಳು

bkt-6-6
ಬಾಗಲಕೋಟೆ ನಗರದಲ್ಲಿ ನಡೆಯುತ್ತಿರುವ ಕೃಷ್ಣಾ ಸಂತ್ರಸ್ತರ ಹೋರಾಟಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದ ನ್ಯಾಯವಾದಿಗಳು ಬೆಂಬಲ ಸೂಚಿಸಿದರು.
Published on

ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ನಡೆಯುತ್ತಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟಕ್ಕೆ ಬಾಗಲಕೋಟೆ ವಕೀಲರ ಸಂಘ ಗುರುವಾರ ಬೆಂಬಲ ವ್ಯಕ್ತಪಡಿಸಿತು.

ಜಿಲ್ಲಾ ನ್ಯಾಯಾಲಯ ಆವರಣದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ನ್ಯಾಯವಾದಿಗಳು ಡಿಸಿ ಎದುರು ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಸರ್ಕಾರ ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಯೋಜನೆ ಅನುಷ್ಠಾನಕ್ಕೆ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.

ನ್ಯಾಯವಾದಿಗಳಾದ ರಮೇಶ ಬದ್ನೂರ, ಡಿ.ಬಿ.ಪೂಜಾರ, ಶಿವಾನಂದ ಟವಳಿ, ಪ್ರಶಾಂತ ನಾರಾಯಣಕರ, ಕಿರಣ ಪವಾಡಿಶೆಟ್ಟರ, ಚಂದ್ರಶೇಖರ ರಾಠೋಡ, ಸುನೀಲ ಕಿರಸೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net