

ಕಲಬುರಗಿ: ಪಹಣಿಗೆ ಆಧಾರ್ ಜೋಡಣೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಗ್ರಾಮ ಆಡಳಿತಾಧಿಕಾರಿಗಳಾದ ಕಮಲಾಪುರ ತಾಲೂಕಿನ ಮಹಾಗಾಂವ್ ಮತ್ತು ಕುರಿಕೋಟಾದ ಜೈಪ್ರಕಾಶ ಮತ್ತು ಚಿಂಚೋಳಿ ತಾಲೂಕಿನ ಚಿಮ್ಮಾಇದ್ಲಾಯಿ ಗ್ರಾಮದ ಸುಮಾ ಅವರಿಗೆ ಕಲಬುರಗಿಯಲ್ಲಿ ಡಿಸಿ ಫೌಜಿಯಾ ತರನ್ನುಮ್ ಶುಕ್ರವಾರ ಅಭಿನಂದನಾ ಪತ್ರ ನೀಡಿದರು. ಎಡಿಸಿ ರಾಯಪ್ಪ ಹುಣಸಗಿ, ಮೀನಾಕ್ಷಿ ಆರ್ಯ, ಸಾಹಿತ್ಯ ಇತರರಿದ್ದರು.