ಪಶು ಸಂಗೋಪನೆ ಇಲಾಖೆಗೆ ಭೇಟಿ

Sing
Published on

ಕಲಬುರಗಿ: ಜಿಲ್ಲಾ ಪಂಚಾಯಿತಿ ಮುಖ್ಯ ಕರ‍್ಯನರ‍್ವಹಣಾಧಿಕಾರಿ ಭಂವರ್​ಸಿಂಗ್​ ಮೀನಾ ಗುರುವಾರ ನಗರದ ಪಶುಪಾಲನಾ ಇಲಾಖೆ ಜಿಲ್ಲಾ ಕಚೇರಿಗೆ ದಿಢೀರ್​ ಭೇಟಿ ನೀಡಿ ಎಕ್ಸ್​ರೇ ಕೋಣೆ, ಶಸಚಿಕಿತ್ಸೆ, ಚಿಕಿತ್ಸಾ ಕೋಣೆ, ಪ್ರಯೋಗಾಲಯ ಇತರ ವಿಭಾಗಗಳ ಪರಿವೀಕ್ಷಣೆ ಮಾಡಿ ಸೂಪರ್​ ಸ್ಪೆಷಾಲಿಟಿ ಪಾಲಿಕ್ಲಿನಿಕ್​ನಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಇತರ ಸೌಲಭ್ಯ ಕುರಿತು ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಕ್ಲಿನಿಕ್​ಗೆ ಚಿಕಿತ್ಸೆಗಾಗಿ ಜಾನುವಾರುಗಳೊಂದಿಗೆ ಬಂದ ರೈತರೊಂದಿಗೆ ಮಾತನಾಡಿದರು. ನಂತರ ಜಾನುವಾರುಗಳನ್ನು ಕೂಡಲೇ ಪರೀಸಿ ಸೂಕ್ತ ಚಿಕಿತ್ಸೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net